• July 9, 2022

ಶಿವಣ್ಣನ ಬರ್ತ್ಡೇಗೆ ವಿಶೇಷ ಉಡುಗೊರೆ ನೀಡುತ್ತಿರೋ ‘ಜೀ’

ಶಿವಣ್ಣನ ಬರ್ತ್ಡೇಗೆ ವಿಶೇಷ ಉಡುಗೊರೆ ನೀಡುತ್ತಿರೋ ‘ಜೀ’

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ವಯಸ್ಸಾದಷ್ಟೂ ಯುವಕರಾಗುವವರು. ಸದ್ಯ ನಾಯಕನಟರಾಗಿ ತಮ್ಮ 125ನೇ ಸಿನಿಮಾದ ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿ ಆಗಿದ್ದು, ಅಭಿಮಾನಿಗಳು ಇವರ ಜನುಮದಿನದ ಸಂಭ್ರಮದ ಸಿದ್ಧತೆಯಲ್ಲಿದ್ದಾರೆ. ಇದೇ ಜುಲೈ 12kke ಶಿವಣ್ಣನವರಿಗೆ 60 ವರ್ಷ ತುಂಬುತ್ತದೆ. ಈ ಸಂಧರ್ಭ ಜನ್ಮದಿನದ ಶುಭಾಶಯ ತಿಳಿಸಲು ಅಭಿಮಾನಿಗಳು ಹಲವು ಕನ್ನಡ ಮಾಧ್ಯಮಗಳು ವಿವಿಧ ರೀತಿಯ ತಯಾರಿ ನಡೆಸಿವೆ. ಸದ್ಯ ಈ ಬಗ್ಗೆ ‘ಜೀ ಪಿಚ್ಚರ್’ ನೀಡಿದ ಘೋಷಣೆ ಎಲ್ಲರ ಮನಸೆಳೆದಿದೆ.

ಶಿವಣ್ಣನವರ 60ನೇ ಜನುಮದಿನದ ಪ್ರಯುಕ್ತ ಸತತ 60ಗಂಟೆಗಳ ಕಾಲ ಶಿವರಾಜಕುಮಾರ್ ಅವರ ಅಭಿನಯದ ಸಿನಿಮಾಗಳನ್ನು ಪ್ರದರ್ಶನ ಮಾಡುವ ನಿರ್ಧಾರವನ್ನು ‘ಜೀ ಪಿಚ್ಚರ್’ ಮಾಡಿದೆ. ಮೂರು ದಿನಗಳ ಕಾಲ ಒಟ್ಟು 20 ಶಿವಣ್ಣನ ಅಭಿನಯದ ಸಿನಿಮಾಗಳು ವಾಹಿನಿಯಲ್ಲಿ ನೋಡಲು ಸಿಗಲಿದೆ. ಜುಲೈ 10ರ ಬೆಳಿಗ್ಗೆ :ಭಾಗ್ಯದ ಬಳೆಗಾರ’ ಸಿನಿಮಾದಿಂದ ಆರಂಭವಾಗಿ ಜನಮದಿನವಾದ ಜುಲೈ 12ರ ರಾತ್ರಿ ‘ಭಜರಂಗಿ 2’ ಸಿನಿಮಾದ ವರೆಗೆ ಒಟ್ಟು 20 ಸಿನಿಮಾಗಳು. ಇದರ ಮಧ್ಯೆ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿನ ಶಿವಣ್ಣನ ಕಥೆ ಕೂಡ ಕಾಣಲು ಸಿಗಲಿದೆ. ‘ದಿ ವಿಲನ್’, ‘ಭಜರಂಗಿ’, ‘ಮಫ್ತಿ’, ‘ಜೋಗಿ’ ಮುಂತಾದ ಹಿಟ್ ಚಿತ್ರಗಳನ್ನು ಈ ಸಿನಿ ಮ್ಯಾರಥಾನ್ ಒಳಗೊಂಡಿರಲಿದೆ.

ಶಿವಣ್ಣ ನಮ್ಮ ಚಂದನವನದ ಮುಂಚೂಣಿ ಕಲಾವಿದರು. ತಮ್ಮ 60ನೇ ವಯಸ್ಸಿನಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ಇವರ ಹೆಸರಿದೆ. ಇವರ ನಟನೆಯ 123ನೇ ಸಿನಿಮಾ ‘ಬೈರಾಗಿ’ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ತಮ್ಮ 125ನೇ ಸಿನಿಮಾ ‘ವೇದಾ’ದ ಚಿತ್ರೀಕರಣದಲ್ಲಿ ಇವರು ಬ್ಯುಸಿ ಆಗಿದ್ದಾರೆ.ಇದರ ಜೊತೆ ಕಿರುತೆರೆಯ ರಿಯಾಲಿಟಿ ಶೋ ಗಳಲ್ಲೂ ಇವರು ಸಕ್ರಿಯರಾಗಿದ್ದಾರೆ.