• February 15, 2022

ಹಾಟ್ ಲುಕ್ ಮೂಲಕ ಪಡ್ಡೆ ಹೈಕ್ಕಳ ಮನ ಕದ್ದ ಯಶಿಕಾ ಆನಂದ್

ಹಾಟ್ ಲುಕ್ ಮೂಲಕ ಪಡ್ಡೆ ಹೈಕ್ಕಳ ಮನ ಕದ್ದ ಯಶಿಕಾ ಆನಂದ್

ತಮಿಳು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಯಶಿಕಾ ಆನಂದ್ ನಟನೆಯ ಮೂಲಕವೂ ಮನೆ ಮಾತಾದ ಚೆಲುವೆ‌. ಕಳೆದ ವರ್ಷ ಭೀಕರ ಕಾರು ಅಪಘಾತಕ್ಕೆ ಈಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಯಶಿಕಾ ಆನಂದ್ ಅವರು ಇದೀಗ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಫೋಟೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುತ್ತಿದ್ದ ಯಶಿಕಾ ಅಪಘಾತದ ನಂತರ ಸೋಶಿಯಲ್ ಮೀಡಿಯಾದಿಂದ ಸಹಜವಾಗಿ ಕೊಂಚ ದೂರ ಉಳಿದಿದ್ದರು. ಈಗ ಮತ್ತೆ ಆಕ್ಟೀವ್ ಆಗಿರುವ ಯಶಿಕಾ ನಟನೆಯತ್ತ ಮುಖ ಮಾಡಿದ್ದಾರೆ.

ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದೆ. ಬಿರುಬೇಸಗೆಯಲ್ಲಿ ಹಾಟ್ ಫೋಟೋ ಹಂಚಿಕೊಂಡಿರುವ ನಟಿ ಯಶಿಕಾ “ಬೇಸಿಗೆಯ ದುಃಖ”ಎಂಬ ಕ್ಯಾಪ್ಶನ್ ಹಾಕಿದ್ದಾರೆ. ಈ ಫೋಟೋಗೆ ಲಕ್ಷಕ್ಕೂ ಮೀರಿದ ಲೈಕ್ಸ್ ಬಂದಿದ್ದು ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದಾರೆ.

ಕಳೆದ ವರ್ಷ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತಕ್ಕೆ ತುತ್ತಾಗಿ ಗಂಭೀರ ಗಾಯಗೊಂಡಿದ್ದರು. ಅವರ ಸ್ನೇಹಿತೆ ವಲ್ಲಿ ಚೆಟ್ಟಿ ಭವಾನಿ ಮೃತಪಟ್ಟಿದ್ದರು.