• June 22, 2022

ಬೈರಾಗಿ ಜೊತೆಗೆ ಬರಲಿದ್ದಾರೆ ಯಶ ಶಿವಕುಮಾರ್

ಬೈರಾಗಿ ಜೊತೆಗೆ ಬರಲಿದ್ದಾರೆ ಯಶ ಶಿವಕುಮಾರ್

ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ ಶಿವಕುಮಾರ್ ನಟನೆಯ ಮೊದಲ ಕನ್ನಡ ಸಿನಿಮಾ ಬೈರಾಗಿ ಬಿಡುಗಡೆಗೆ ತಯಾರಾಗಿದೆ. ವಿಜಯ್ ಮಿಲ್ಟನ್ಸ್ ನಿರ್ದೇಶನದ ಬೈರಾಗಿ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ನಟಿಸಿದ್ದು ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಯಶ ಶಿವಕುಮಾರ್ ಬಣ್ಣ ಹಚ್ಚಿದ್ದಾರೆ.

ಮೊದಲಿನಿಂದಲೂ ನನಗೆ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ವಿಶೇಷ ಒಲವು. ಚಿಕ್ಕ ವಯಸ್ಸಿನಿಂದಲೂ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ನಾನು ಕಾಲೇಜು ದಿನಗಳಲ್ಲಿ ಸ್ಟೇಜ್ ಪ್ರೋಗ್ರಾಂ ನೀಡಲು ಶುರು ಮಾಡಿದೆ. ಇದರಿಂದ ನನ್ನ ಮೇಲೆ ನನಗೆ ಕಾನ್ಫಿಡೆನ್ಸ್ ಹೆಚ್ಚಾಯಿತು. ಮಾತ್ರವಲ್ಲ ನಟಿಯಾಗಬೇಕು ಎಂಬ ಬಯಕೆ ಉಂಟಾಯಿತು” ಎಂದು ನಟನಾ ಪಯಣದ ಬಗ್ಗೆ ಹೇಳುತ್ತಾರೆ ಯಶ ಶಿವಕುಮಾರ್.

ಬೈರಾಗಿ ಸಿನಿಮಾದ ತಮ್ಮ ಪಾತ್ರದ ಕುರಿತು ಮಾತನಾಡಿರುವ ಯಶ ಶಿವಕುಮಾರ್ ” ನಾನು ಈ ಸಿನಿಮಾದಲ್ಲಿ ಕಾಲೇಜು ಹುಡುಗಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. ಬೋಲ್ಡ್ ಆಗಿರುವ ಯಾಕೆ ಯಾರನ್ನು ಕ್ಯಾರೆ ಮಾಡುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನನ್ನ ಪಾತ್ರದಿಂದ ಕಥೆಗೆ ತಿರುವು ಸಿಗಲಿದೆ. ಸಿನಿ ಕೆರಿಯರ್ ನಲ್ಲಿ ಇಂತಹ ಪಾತ್ರ ದೊರೆತಿರುವುದಕ್ಕೆ ಖುಷಿ ತಂದಿದೆ” ಎಂದಿದ್ದಾರೆ.

ಬೈರಾಗಿ ಜೊತೆಗೆ ಪದವಿಪೂರ್ವ, ಮಾನ್ಸೂನ್ ರಾಗ, ದಂತಕಥೆ, ಗಣ, ಭರ್ಜರಿ ಗಂಡು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಯಶ ಶಿವಕುಮಾರ್ ಸದ್ಯ ಸ್ಯಾಂಡಲ್ ವುಡ್ ನ. ಬ್ಯುಸಿ ನಟಿ ಹೌದು.