• April 23, 2022

ಜನರಿಗೆ ಧನ್ಯವಾದ ಹೇಳಿದ ರಾಕಿಂಗ್ ಸ್ಟಾರ್

ಜನರಿಗೆ ಧನ್ಯವಾದ ಹೇಳಿದ ರಾಕಿಂಗ್ ಸ್ಟಾರ್

ಕೆಜಿಎಫ್ 2 ಸಿನಿಮಾಕ್ಕೆ ಇಡೀ ವಿಶ್ವವೇ ಬೆರಗಾಗಿದೆ. ಪ್ರಶಂಸೆಗಳ ಸುರಿಮಳೆ ಆಗುತ್ತಿದೆ. ಜನರ ಪ್ರತಿಕ್ರಿಯೆ, ಪ್ರೀತಿ ನೋಡಿ ಹೊಂಬಾಳೆ ಫಿಲ್ಮ್ಸ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಈಗ ನಟ ಯಶ್ ಧನ್ಯವಾದ ಸಲ್ಲಿಸಿದ್ದಾರೆ.
ಇದುವರೆಗೂ 600 ಕೋಟಿ ಗಳಿಸಿರುವ ಚಿತ್ರ ಕಲೆಕ್ಷನ್ ನಲ್ಲಿ ಮುನ್ನುಗ್ಗುತ್ತಿದೆ. ಯಶ್ ನಟನೆಯನ್ನು ಜನ ಮೆಚ್ಚಿದ್ದಾರೆ.

ಕನ್ನಡ ಚಿತ್ರರಂಗವನ್ನು ಎಲ್ಲೆಡೆ ಪರಿಚಯಿಸಿದ ಕೆಜಿಎಫ್ ನ ಯಶಸ್ಸು ನೋಡಿ ಸಂತಸಗೊಂಡಿರುವ ಯಶ್ ಧನ್ಯವಾದ ಹೇಳಿದ್ದಾರೆ. ಕೆಜಿಎಫ್ 2 ರಿಲೀಸ್ ನಂತರ ರಾಧಿಕಾ ಹಾಗೂ ಮಕ್ಕಳೊಂದಿಗೆ ವೆಕೇಶನ್ ಮೂಡಿನಲ್ಲಿದ್ದ ಯಶ್ ಅವರಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಆಗಿರಲಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಕಥೆಯನ್ನು ಹೇಳುವ ಮೂಲಕ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ಒಂದು ಊರು. ಅಲ್ಲಿ ಬರಗಾಲದ ಸ್ಥಿತಿ ಬಂದಿತ್ತು. ಮಳೆಗಾಗಿ ಪ್ರಾರ್ಥನೆ ಮಾಡಲು ಊರಿನ ಜನ ನಿರ್ಧಾರ ಮಾಡಿದ್ದರು. ಅಲ್ಲಿ ಬಂದ ಹುಡುಗನೊಬ್ಬ ಮಳೆ ಬಂದರೆ ಎಂದು ಛತ್ರಿ ತಂದಿದ್ದ. ಇದನ್ನು ಹಲವು ಜನರು ಹುಚ್ಚುತನ ಎಂದರು. ಕೆಲವರು ಓವರ್ ಕಾನ್ಫಿಡೆನ್ಸ್ ಎಂದರು. ಆದರೆ ಅದೇನು ಗೊತ್ತಾ ? ನಂಬಿಕೆ. ನಾನು ಆಗ ಹುಡುಗನಂತೆ. ಈ ದಿನ ಬರುತ್ತದೆ ಎಂದು ನಂಬಿಕೆ ಇಟ್ಟು ಕುಳಿತಿದ್ದ ಹುಡುಗ ನಾನು. ಧನ್ಯವಾದ ಎಂದರೆ ಸಾಕಾಗುವುದಿಲ್ಲ. ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದಗಳು. ಕೆಜಿಎಫ್ ತಂಡದ ಪರವಾಗಿ ನಮಗೆ ಖುಷಿಯಾಗಿದೆ ಎಂದು ಹೇಳುತ್ತೇನೆ. ನಿಮ್ಮ ಹೃದಯವೇ ನನ್ನ ಟೆರಿಟರಿ” ಎಂದಿದ್ದಾರೆ ಯಶ್.