• January 8, 2022

ಯಶ್ ಹುಟ್ಟುಹಬ್ಬಕ್ಕೆ ಬ್ಯೂಟಿಫುಲ್ ಗಿಫ್ಟ್ ಕೊಟ್ಟ ಐರಾ‌ ಮತ್ತು ಯಥರ್ವ್

ಯಶ್ ಹುಟ್ಟುಹಬ್ಬಕ್ಕೆ ಬ್ಯೂಟಿಫುಲ್ ಗಿಫ್ಟ್ ಕೊಟ್ಟ ಐರಾ‌ ಮತ್ತು ಯಥರ್ವ್

ನ್ಯಾಷನಲ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.. ಸ್ಯಾಂಡಲ್ ವುಡ್ ಸ್ಟಾರ್ ಆಗಿದ್ದು ಈಗ ನ್ಯಾಷನಲ್ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ಯಶ್ ಈ ವರ್ಷವೂ ಕೂಡ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ…

ಕೋವಿಡ್ ಹೆಚ್ಚಾಗಿರುವ ಕಾರಣ ಕಳೆದ 2ವರ್ಷಗಳಿಂದ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ..ಈ ವರ್ಷ ಮಡದಿ ಹಾಗೂ ಮಕ್ಕಳ ಜೊತೆ ಯಶ್ ಬರ್ತಡೇ ಸೆಲೆಬ್ರಿಟ್ ಮಾಡಿದ್ದಾರೆ…

ಅಪ್ಪನಿಗಾಗಿ ಐರಾ ಹಾಗೂ ಯಥರ್ವ್ ಬ್ಯೂಟಿಫುಲ್‌ ಆಗಿರೋ ಗಿಫ್ಟ್ ಕೂಡ ನೀಡಿದ್ದಾರೆ..ಐರಾ ಮತ್ತು ಯಥರ್ವ ಕೈ ನ ಬಣ್ಣದ ಪ್ರಿಂಟ್ ಯಶ್ ಗೆ ಉಡುಗೊರೆಯಾಗಿ ನೀಡಿದ್ದಾರೆ…ಪುಟ್ಟಮಕ್ಕಳ ಅಂದದ ಉಡುಗೊರೆ ಕಂಡು ರಾಕಿ ಬಾಯ್ ಸಖತ್ ಖುಷಿಯಾಗಿದ್ದಾರೆ…