• February 11, 2022

ಇನ್ಮುಂದೆ ವೈಟ್ ಅಂಡ್ ವೈಟ್ ಪಂಚೆ ಧರಿಸಿ ನಿಮ್ಮ ಮನೆಗೆ ಬರಲಿದ್ದಾರೆ ರಾಕಿಂಗ್ ಸ್ಟಾರ್

ಇನ್ಮುಂದೆ ವೈಟ್ ಅಂಡ್ ವೈಟ್ ಪಂಚೆ ಧರಿಸಿ ನಿಮ್ಮ ಮನೆಗೆ ಬರಲಿದ್ದಾರೆ ರಾಕಿಂಗ್ ಸ್ಟಾರ್

ಸ್ಯಾಂಡಲ್‌ವುಡ್ ನ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ಇನ್ನು ಕೆಲವೇ‌ದಿನಗಳಲ್ಲಿ ತೆರೆಗೆ ಬರಲಿದೆ…ಅದೇ ತಯಾರಿಯಲ್ಲಿ ಯಶ್ ಬ್ಯುಸಿ ಆಗಿದ್ದಾರೆ…ಇನ್ನು ಕೆಲವೇ ದಿನಗಳಲ್ಲಿ ಭಾರತದ ಮೂಲೆ ಮೂಲೆಗೂ ತೆರಳಿ ಚಿತ್ರದ ಪ್ರಚಾರ ಆರಂಭ ಮಾಡಲಿದ್ದಾರೆ ಯಶ್ ಅದಕ್ಕೂ ಮುನ್ನ ರಾಕಿಂಗ್ ಸ್ಟಾರ್ ‌ಕಂಪ್ಲೀಟ್ ಟ್ರೆಡಿಷನಲ್ ಲುಕ್ ನಲ್ಲಿ ನಿಮ್ಮ ಮನೆಗೆ ಎಂಟ್ರಿ ಕೊಡಲಿದ್ದಾರೆ…

ಹೌದು ಯಶ್ ಜಾಹೀರಾತಿನ ಮೂಲಕ‌ ನಿಮ್ಮ ಮನೆ ಹಾಗೂ ಮನಗಳಿಗೆ ಲಗ್ಗೆ ಇಡಲಿದ್ದಾರೆ ಅದು ಕೂಡ ಫುಲ್ ದೇಸಿ ಸ್ಟೈಲ್ ನಲ್ಲಿ ಅನ್ನೋದು ಇಂಟ್ರೆಸ್ಟಿಂಗ್ ..

ಈಗಾಗಲೇ ಸಾಕಷ್ಟು ಜಾಹೀರಾತುಗಳನ್ನು ಒಪ್ಪಿಕೊಂಡು ಮುಗಿಸಿಕೊಟ್ಟಿರೋ ಯಶ್ ಈಗ ರಾಮ್ ರಾಜ್ ಜಾಹೀರಾತಿಗೆ ಸಹಿ ಮಾಡಿದ್ದು ರಾಮ್ ರಾಜ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಲಿದ್ದಾರೆ…

ಈಗಾಗಲೇ ಈ‌ ಒಪ್ಪಂದಕ್ಕೆ ರಾಕಿಂಗ್ ಸ್ಟಾರ್ ಸಹಿ ಮಾಡಿದ್ದು ಇನ್ಮು ಜಾಹೀರಾತಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ..ಒಟ್ಟಾರೆ ಸಾಕಷ್ಟು ದಿನಗಳ ನಂತ್ರ ರಾಕಿ ಬಾಯ್ ರನ್ನ ದೇಸಿ ಅವತಾರದಲ್ಲಿ ನೋಡೋ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ …