• July 12, 2022

ಟ್ರೆಂಡಿಂಗ್ ಲಿಸ್ಟ್ ಸೇರಿದ ಯಶ್ ಹೆಸರು

ಟ್ರೆಂಡಿಂಗ್ ಲಿಸ್ಟ್ ಸೇರಿದ ಯಶ್ ಹೆಸರು

ನಟ ಯಶ್ ಈಗಾಗಲೇ ಚಿತ್ರರಂಗದಲ್ಲಿ ಉತ್ತುಂಗ ಸ್ಥಾನವೇರಿದ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದಂತವರು. ಲವ್ವರ್ ಬಾಯ್ ಯಾಗಿದ್ದ ನಟ ಕೆಜಿಎಫ್ ಮೂಲಕ ಕ್ರಿಯೇಟ್ ಮಾಡಿದ್ದು ಬೇರೆಯೇ ಜಗತ್ತು. ಕೆಜಿಎಫ್ 2 ಕೋಟಿಗಟ್ಟಲೆ ಬಾಚಿದ ಮೇಲಂತೂ ಯಶ್ ಅವರ ಮುಂದಿನ ನಡೆಯ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ರಾಕಿಬಾಯ್ ಮುಂದಿನ ಸಿನಿಮಾ ಅಂದರೆ 19ನೇ ಸಿನಿಮಾ ಏನಿರಬಹುದು ಎಂದು ಅಭಿಮಾನಿಗಳೆಲ್ಲ ಕಾತರದಿಂದ ಕಾಯುತ್ತಿದ್ದಾರೆ.

ತಮ್ಮ ಕೆರಿಯರ್ ನ ಆರಂಭದಿಂದಲೇ ಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸಿ ಮುಂದೆ ಬಂದವರು ನಟ ಯಶ್. ಯಶಸ್ಸು ಸುಲಭವಾಗಿ ಸಿಗುವುದಿಲ್ಲ ಎಂಬುದನ್ನು ಚೆನ್ನಾಗಿ ಅರಿತಿರುವ ನಟ ತಮ್ಮ ಮುಂದಿನ ಸಿನಿಮಾ ಸೆಲೆಕ್ಷನ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆರೆಮರೆಯಲ್ಲಿ ತೀವ್ರ ಪರಿಶ್ರಮವನ್ನು ಪಡುತ್ತಿರುವ ನಟ ಅಭಿಮಾನಿಗಳ ಆಸೆಗೆ ತಕ್ಕಂತೆ ಬರುತ್ತಾರಾ ಕಾದು ನೋಡಬೇಕು.

ಈ ಹಿಂದೆ ಜೂನ್‌ನಲ್ಲಿಯೇ ಯಶ್ 19ನೇ ಚಿತ್ರ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಚಿತ್ರದ ಟೈಟಲ್ ಬಗ್ಗೆ, ಲಾಂಚ್ ದಿನಾಂಕದ ಬಗ್ಗೆ ಅಭಿಮಾನಿ ಬಳಗದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ನಟ ಯಶ್ ಹೆಸರು ಟ್ರೆಂಡಿಂಗ್ ಲಿಸ್ಟ್ ಸೇರಿದೆ.

ಇನ್ನು ಯಶ್ ಅವರ ಮುಂದಿನ ಸಿನಿಮಾದ ನಿರ್ದೇಶಕ ನರ್ತನ್ ಎಂದು ಹೇಳಲಾಗುತ್ತಿದ್ದು, ಖ್ಯಾತ ನಿರ್ಮಾಣ ಕೆವಿಎನ್ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.