• November 29, 2021

ಬಹುದಿನಗಳ ನಂತ್ರ ಅಭಿಮಾನಿಗಳ ಮುಂದೆ ಬಂದ ಯಶ್ ಮತ್ತು ರಾಧಿಕಾ‌ ಪಂಡಿತ್ .

ಬಹುದಿನಗಳ ನಂತ್ರ ಅಭಿಮಾನಿಗಳ ಮುಂದೆ ಬಂದ ಯಶ್ ಮತ್ತು ರಾಧಿಕಾ‌ ಪಂಡಿತ್ .

ಕೋವಿಡ್ ನಿಂದಾಗಿ ಸಿನಿಮಾ‌ ಕಲಾವಿದರು ಯಾವುದೇ ಸಾರ್ವಜನಿಕ ಕಾರ್ಯಕ್ರಮ ಹಾಗೂ ಅಭಿಮಾನಿಗಳ ಭೇಟಿಯ ಸಮಾರಂಭಗಳಲ್ಲಿ ಭಾಗಿಯಾಗಿಲ್ಲ…ಆದ್ರೆ ಸಾಕಷ್ಟು ದಿನಗಳ ನಂತ್ರ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ‌ಪಂಡಿತ್‌ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ..

ಯಶ್ ಮ್ಯಾನೇಜರ್ ಆಗಿರೋ ಚೇತನ್ ಅವ್ರ ನಿಶ್ಚಿತಾರ್ಥ ನಿನ್ನೆ ಬೆಂಗಳೂರಿನಲ್ಲಿ‌ ನಡೆದಿದ್ದು ಈ ಸಮಾರಂಭದಲ್ಲಿ ಯಶ್ .ರಾಧಿಕಾ‌ ಭಾಗಿ ಆಗಿದ್ದಾರೆ…ಅಷ್ಟೇ ಅಲ್ಲದೆ ರಾಧಿಕಾ‌ ತಂದೆ .ತಾಯಿ ಹಾಗೂ ಯಶ್ ತಂಗಿ ಮತ್ತು ಭಾವ ಕೂಡ ಮದುವೆಗೆ ಭೇಟಿಕೊಟ್ಟು ವಧು ವರರಿಗೆ ಶುಭ ಕೋರಿದ್ರು…ಇನ್ನು ಐರಾ ಹಾಗೂ ಯಥರ್ವ್ ಕೂಡ ಮದುವೆ ಮನೆಯಲ್ಲಿ ಕಾಣಿಸಿಕೊಂಡ‌ ಬಂದಿದ್ದ ಜನರ‌ ಗಮನ ಸೆಳೆದ್ರು…