• April 25, 2022

ಕೆಜಿಎಫ್ 2 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತಾ?

ಕೆಜಿಎಫ್ 2 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸಲ್ಲಿ ಕಮಾಲ್ ಮಾಡುತ್ತಿದೆ. ಹೊಸ ದಾಖಲೆಗಳನ್ನು ಮಾಡುತ್ತಾ ಮುನ್ನುಗ್ಗುತ್ತಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿರುವ ಚಿತ್ರವನ್ನು ಎಲ್ಲಾ ಸ್ಟಾರ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ತೆಲುಗು ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವ ಅಲ್ಲು ಅರ್ಜುನ್ ಈಗ ಕೆಜಿಎಫ್ 2 ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಟ್ವೀಟ್ ಮಾಡಿರುವ ಅಲ್ಲು ಅರ್ಜುನ್ ” ಕೆಜಿಎಫ್ 2 ಚಿತ್ರತಂಡಕ್ಕೆ ಶುಭಾಶಯಗಳು. ಯಶ್ ಅವರ ನಟನೆ ಅದ್ಭುತವಾಗಿದೆ. ಸಂಜಯ್ ದತ್ , ರವೀನಾ ಟಂಡನ್ , ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ ಅದ್ಭುತವಾಗಿದೆ. ತಂತ್ರಜ್ಞರಿಗೆ ನನ್ನ ನಮನಗಳು. ಪ್ರಶಾಂತ್ ನೀಲ್ ಅವರಿಂದ ಒಂದು ಅದ್ಭುತ ಪ್ರದರ್ಶನ ಬಂದಿದೆ. ಅವರ ಆಲೋಚನೆಗೆ ನನ್ನ ನಮನಗಳು. ಒಂದು ಅದ್ಭುತ ಸಿನಿಮಾ ಅನುಭವ ನೀಡಿದ್ದಕ್ಕೆ ಹಾಗೂ ಭಾರತದ ಸಿನಿರಂಗದ ಧ್ವಜವನ್ನು ಎತ್ತರದಲ್ಲಿ ಹಾರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ.

ಅಲ್ಲು ಅರ್ಜುನ್ ಅವರ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ನೀಲ್ ” ಧನ್ಯವಾದಗಳು ಅಲ್ಲು ಅರ್ಜುನ್ ಅವರೇ, ಇದು ನಮಗೆ ದೊಡ್ಡದು. ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದಗಳು” ಎಂದಿದ್ದಾರೆ.