- February 15, 2022
ಇಷ್ಟು ಒಳ್ಳೆ ಹುಡುಗನಿಗೆ ಇನ್ನೂ ಮದುವೆಯಾಗಿಲ್ಲ ಪ್ರಭಾಸ್ ಗೆ ಪೂಜಾ ಹೆಗ್ಡೆ ಪ್ರಶ್ನೆ ?


ತೆಲುಗು ಸಿನಮಾರಂಗದಲ್ಲಿ ಇಷ್ಟು ದಿನ ಕಾದರೂ…ಹುಡುಕಿದರು ಇನ್ನೂ ಕೂಡ ಅಭಿಮಾನಿಗಳಿಗೆ ಉತ್ತರ ಸಿಗದೆ ಕಾಡುತ್ತಿರುವ ಪ್ರಶ್ನೆಯೆಂದರೆ ಪ್ರಭಾಸ್ ಯಾಕೆ ಮದುವೆಯಾಗಿಲ್ಲ…


ಹೌದು ಈಗಾಗಲೇ ಪ್ರಭಾಸ್ ಮದುವೆ ವಿಚಾರ ಸಾಕಷ್ಟು ಬಾರಿ ಚರ್ಚೆಯಾಗಿತ್ತು…ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು ..ಅದಾದ ನಂತರ ಇನ್ನೂ ಸಾಕಷ್ಟು ಹುಡುಗಿಯರ ಜೊತೆ ಪ್ರಭಾಸ್ ಹೆಸರು ತಳುಕು ಹಾಕುತ್ತಲೇ ಇತ್ತು …ಆದರೆ ಈಗ ಟಾಲಿವುಡ್ ನ ನಂಬರ್ ಒನ್ ಪೂಜಾ ಹೆಗ್ಡೆ ಅವರಿಗೂ ಅದೇ ಪ್ರಶ್ನೆ ಕಾಡುತ್ತಿದೆ… ಹೌದು ಪ್ರಭಾಸ್ ಅವರನ್ನೇ ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಪೂಜಾ ಪ್ರಶ್ನೆ ಮಾಡಿದ್ದಾರೆ ..


ಹಾಗಂತ ಪೂಜಾ ಈ ಪ್ರಶ್ನೆ ಮಾಡುತ್ತಿರುವುದು ನಿಜ ಜೀವನದಲ್ಲಲ್ಲ ನಿನ್ನೆಯಷ್ಟೇ ಬಿಡುಗಡೆಯಾಗಿರುವ ರಾಧೆಶ್ಯಾಮ್ ಸಿನಿಮಾದ ಟೀಸರ್ ನಲ್ಲಿ… ಈ ಪ್ರಶ್ನೆಯನ್ನ ಪೂಜಾ ಸಿನಿಮಾದ ನಾಯಕ ಶ್ಯಾಮ್ ಅವರಿಗೆ ಕೇಳಿದ್ದಾರೆ…
ರಾಧೆಶ್ಯಾಮ್ ಸಿನೆಮಾ ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ವೃತ್ತಿಜೀವನದಲ್ಲಿ ತುಂಬಾನೇ ಡಿಫರೆಂಟಾದ ಸಿನಿಮಾ ಎನ್ನಲಾಗುತ್ತಿದೆ…. ಇದೇ ಕಾರಣದಿಂದ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿತ್ತು ಪ್ರಭಾಸ್ ಲವರ್ ಬಾಯ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ….ಈಗಾಗಲೇ ಟ್ರೇಲರ್, ಸಾಂಗು ಕುತೂಹಲ ಮೂಡಿಸಿತ್ತು ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ ..


ರಾಧೆಶ್ಯಾಮ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆ ಆಗುವ ಸಾಧ್ಯತೆಗಳಿದ್ದು ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ…ತೆಲುಗಿನಲ್ಲಿ ತಯಾರಾಗಿರುವ ರಾಧೆಶ್ಯಾಮ್ ಸಿನಿಮಾ ಕನ್ನಡ ಮಲಯಾಳಂ ಹಿಂದಿ ತಮಿಳು ಸೇರಿದಂತೆ 5ಭಾಷೆ ಗಳಲ್ಲಿ ತೆರೆಗೆ ಬರಲಿದೆ …
- ಮಕ್ಕಳ ಮನಸ್ಸಿಗೆ ಕನ್ನಡಿಯಾಗ ಬರುತ್ತಿದೆ ‘ರೂಬಿಕ್ಸ್’.
- Flat ನಂ.9 ರಲ್ಲಿ ಮರ್ಡರ್, ಕೊಲೆಗಾರ ಯಾರು..?
- ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ.
- ಚಿತ್ರೀಕರಣ ಮುಗಿಸಿದ ಅಪ್ಪು ನಟಿಸಬೇಕಿದ್ದ ಮುಂದಿನ ಸಿನಿಮಾ ‘ರಂಗಸಮುದ್ರ’
- ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’.
- ಮಹೇಶ್ ಬಾಬು ಜೊತೆ ನಟಿಸಲಿದ್ದಾರ ಶ್ರೀಲೀಲಾ??
- ‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ.
- ಬರುತ್ತಿದೆ ‘ಗಾಳಿಪಟ 2 ‘ಚಿತ್ರದ ಟ್ರೈಲರ್.
- ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ
- ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ಯ ಒಟಿಟಿ ಪ್ರವೇಶ.


