• February 7, 2022

ಲತಾ ಮಂಗೇಶ್ಕರ್ ಪಾರ್ಥಿವ ಮುಂದೆ ಉಗುಳಿದ್ರಾ ಶಾರುಖ್ ?

ಲತಾ ಮಂಗೇಶ್ಕರ್ ಪಾರ್ಥಿವ ಮುಂದೆ ಉಗುಳಿದ್ರಾ ಶಾರುಖ್ ?

ಬಾಲಿವುಡ್ ನ ಕಿಂಗ್ ಖಾನ್ . ಶಾರುಖ್ ಖಾನ್
ಪದೇ ಪದೇ ವಿವಾದದಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ
ಕೆಲವು ದಿನಗಳ ಹಿಂದೆಯಷ್ಟೇ ಶಾರುಕ್ ಪುತ್ರ ಡ್ರಗ್ಸ್ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಹೊರ ಬಂದು ಎಲ್ಲಾ ವಿಚಾರಗಳಿಂದ ಶಾರುಖ್ ಹೊರಬರಲು ಪಯತ್ನಿಸುತ್ತಿರೋ ಬೆನ್ನಲ್ಲೇ ಮತ್ತೊಂದು ಹೊಸ ವಿವಾದ ಶುರುವಾಗಿದೆ…

ಹೌದು ನಿನ್ನೆಯಷ್ಟೇ ನಿಧನರಾದ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ನಟ ಶಾರುಖ್ ಖಾನ್ ಭಾಗಿಯಾಗಿದ್ದರು.. ನಟ ಅವರ ಅಂತಿಮ ದರ್ಶನ ಪಡೆಯುವ ಹೊತ್ತಿನಲ್ಲಿ ಶಾರುಖ್ ಖಾನ್ ಹಾಗೂ ಪೂಜಾ ದದಲ್ಲಾನಿ ಇಬ್ಬರು ಒಟ್ಟಾಗಿ ಹೋಗಿ ದರ್ಶನ ಪಡೆದರು ..

ಪೂಜಾ‌ ದದಲ್ಲಾನಿ ಕೈಮುಗಿದು ತನ್ನದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದರೆ… ಶಾರುಖ್ ಖಾನ್ ತನ್ನ ಧರ್ಮದ ರೀತಿಯಲ್ಲಿ ಕೈ ಚಾಚಿ ಬೇಡಿ ನಂತರ ಮಾಸ್ಕ್ ತೆಗೆದು ಗಾಳಿಯಲ್ಲಿ ಉರುಬಿದ್ದಾರೆ ಅಂದರೆ ಮುಸಲ್ಮಾನ್ ಪದ್ಧತಿಯಲ್ಲಿ ಈ ರೀತಿ ದೇವರ ದಯೆ ಕೇಳಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಅವರಿಗೆ ಸ್ವರ್ಗಪ್ರಾಪ್ತಿಯಾಗಲಿ ಎಂದು ಬೇಡಿಕೊಂಡು ನಂತರ ಗಾಳಿಯಲ್ಲಿ ಉರುಬುವ ಪದ್ಧತಿ ಜಾರಿಯಲ್ಲಿದೆ…ಅದೇ ರೀತಿ ಶಾರುಖ್ ಲತಾ ಮಂಗೇಶ್ಕರ್ ರ ಪಾರ್ಥಿವ ಶರೀರದ ಮುಂದೆ ಮಾಡಿದ್ದಾರೆ.. ಈಗ ಅದೇ ವಿವಾದಕ್ಕೆ ಕಾರಣವಾಗಿದೆ.

ಶಾರುಖ್‌ ಪಾರ್ಥಿವ ಶರೀರದ ಮುಂದೆ ಉರುಬಿಲ್ಲ ಉಗುಳಿದ್ದಾರೆ… ಈ ಪದ್ಧತಿ ಸರಿಯಿಲ್ಲ ಹಿಂದೂಗಳಲ್ಲಿ ಈ ರೀತಿ ಮಾಡುವುದಿಲ್ಲ …ನಾವು ಪಾರ್ಥಿವ ಶರೀರವನ್ನು ದೇವರಂತೆ ಕಾಣುತ್ತೇವೆ.. ಹೀಗೆ ಸಾಕಷ್ಟು ರೀತಿಯಲ್ಲಿ ನೆಟ್ಟಿಗರು ಶಾರುಖ್ ಖಾನ್ ನನ್ನ ಟ್ರೋಲ್ ಮಾಡುತ್ತಿದ್ದಾರೆ …ಆದರೆ ಯಾವುದೇ ವಿಚಾರಕ್ಕೂ ಡೋಂಟ್ ಕೇರ್ ಎನ್ನುತ್ತಿರುವ ಶಾರೂಕ್ ತಾನಾಯ್ತು ತನ್ನ ಪಾಡಾಯ್ತು ಅಂತ ಸೈಲೆಂಟ್ ಆಗಿದ್ದಾರೆ…ಲತಾ ಮಂಗೇಶ್ಕರ್ ಶಾರುಖ್ ಖಾನ್ ಅವ್ರ ಬಹುತೇಕ ಸಿನಿಮಾಗಳಿಗೆ ಹಾಡಿದ್ದರು ಅಷ್ಟೇ ಅಲ್ಲದೇ ಲತಾ ಹಾಡಿದ್ದ ಎಲ್ಲಾ ಹಾಡಿಗಳು ಶಾರುಖ್ ಖಾನ್ ಗೆ ಹಿಟ್ ತಮಧು ಕೊಟ್ಟಿತ್ತು…