• May 8, 2022

ದಾಖಲೆ ಮೊತ್ತಕ್ಕೆ ಮಾರಾಟವಾದ ವಿಕ್ರಾಂತ್ ರೋಣ ರೈಟ್ಸ್

ದಾಖಲೆ ಮೊತ್ತಕ್ಕೆ ಮಾರಾಟವಾದ ವಿಕ್ರಾಂತ್ ರೋಣ ರೈಟ್ಸ್

ಕನ್ನಡ ಸಿನಿರಂಗ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕೆಜಿಎಫ್ ಚಿತ್ರದ ನಂತರ ಈಗ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ ರೋಣ ಚಿತ್ರ ಎಲ್ಲೆಡೆ ಹವಾ ಎಬ್ಬಿಸಿದೆ.

ಕರ್ನಾಟಕ ಮಾತ್ರವಲ್ಲದೆ ವಿಶ್ವದಾದ್ಯಂತ ಈ ಚಿತ್ರ ಬೇಡಿಕೆ ಪಡೆದುಕೊಂಡಿದ್ದು 3ಡಿಯಲ್ಲಿ ಬರುತ್ತಿರುವುದರಿಂದ ಸಿನಿಪ್ರಿಯರ ಗಮನ ಸೆಳೆದಿದೆ. ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಕುತೂಹಲ ಮೂಡಿಸಿದೆ.

ಕರ್ನಾಟಕ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲಿಯೂ ಭಾರಿ ಬೇಡಿಕೆ ಹೊಂದಿರುವ ವಿಕ್ರಾಂತ ರೋಣ ಚಿತ್ರ ಮೂಲಗಳ ಪ್ರಕಾರ ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆದ ಮೊದಲ ಕನ್ನಡ ಸಿನಿಮಾವಾಗಿದೆ.

ವಿಕ್ರಾಂತ ರೋಣ ಬಿಡುಗಡೆಗೆ ಇನ್ನು ಎರಡು ತಿಂಗಳು ಬಾಕಿ ಇದೆ. ಸುದೀಪ್ ಸಿನಿಮಾ ಇದೇ ಮೊದಲ ಬಾರಿಗೆ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. 3ಡಿಯಲ್ಲಿ ರಿಲೀಸ್ ಆಗುತ್ತಿರುವ ಕಾರಣ ಭಾರಿ ಕುತೂಹಲ ಮೂಡಿಸಿದೆ. ಒನ್ ಟ್ವೆಂಟಿ 8 ಮೀಡಿಯಾ ಸಿನಿಮಾ ರೈಟ್ಸ್ ಅನ್ನು ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.

ಹತ್ತು ಕೋಟಿ ರೂಪಾಯಿಗೆ ಓವರ್ ಸೀಸ್ ಹಕ್ಕುಗಳನ್ನು ಒನ್ ಟ್ವೆಂಟಿ 8 ಮೀಡಿಯಾ ಪಡೆದುಕೊಂಡಿದೆ. ಈ ಮೂಲಕ ವಿದೇಶಿ ಹಕ್ಕುಗಳು ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ.

ಜುಲೈ 28ರಂದು ತೆರೆಗೆ ಬರಲಿರುವ ವಿಕ್ರಾಂತ ರೋಣ ಚಿತ್ರದಲ್ಲಿ ಸುದೀಪ್ , ಜಾಕ್ವೆಲಿನ್ ಫರ್ನಾಂಡಿಸ್ , ನೀತಾ ಅಶೋಕ್ ,ನಿರೂಪ್ ಭಂಡಾರಿ ನಟಿಸಿದ್ದಾರೆ.