- February 22, 2022
ಮದುವೆ ಗಾಸಿಪ್ ಬಗ್ಗೆ ಕ್ಲಾರಿಟಿ ಕೊಟ್ಟ ವಿಜಯ್ ದೇವರಕೊಂಡ


ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾ ಕಲಾವಿದರು… ಒಂದೇ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ ಎನ್ನುವುದನ್ನು ಹೊರತಾಗಿ ಇಬ್ಬರು ಉತ್ತಮ ಸ್ನೇಹಿತರು… ಈಗಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಅಭಿನಯಿಸಿ ಸಕ್ಸಸ್ ಕಂಡಿರುವ ಈ ಜೋಡಿ ಬಗ್ಗೆ ಆಗಾಗ ಗಾಸಿಪ್ ಆಗುತ್ತಲೇ ಇರುತ್ತೆ…


ಇನ್ನು ಅದಕ್ಕೆ ತಕ್ಕಂತೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಪದೇಪದೆ ಒಟ್ಟಿಗೆ ಕಾಣಿಸಿಕೊಳ್ಳುವುದು ಕಾಮನ್ನಾಗಿ ಹೋಗಿದೆ… ಮುಂಬೈಗೆ ಹೋದಾಗಲೆಲ್ಲಾ ರಶ್ಮಿಕಾ …ವಿಜಯ್ ದೇವರಕೊಂಡ ಅವರನ್ನ ಮೀಟ್ ಮಾಡದೇ ವಾಪಸ್ ಬರುವುದೇ ಇಲ್ಲ…ಡಿನ್ನರ್ ಗಾಗಿ .ಜಿಮ್ ನಲ್ಲಿ ಹೀಗೆ ಒಟ್ಟೊಟ್ಟಿಗೆ ಕಾಣಿಸಿಕೊಂಡು ಗಾಸಿಪ್ ಗೆ ಕಾರಣವಾಗ್ತಿದ್ದಾರೆ…
ಯಾರೇನೇ ಹೇಳಿದರು ನಾವಿಬ್ಬರೂ ಇಂದಿಗೂ ಕೂಡ ಉತ್ತಮ ಸ್ನೇಹಿತರು ಎಂದು ಹೇಳಿಕೊಂಡು ಓಡಾಡುತ್ತಿದ್ದರೆ.. ಆದ್ರೆ ಇತ್ತೀಚೆಗಷ್ಟೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇದೇ ವರ್ಷಾಂತ್ಯದಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡಿತ್ತು …


ಇವರಿಬ್ಬರ ಮಧ್ಯೆ ಇರುವಂಥ ಆತ್ಮೀಯತೆಯೇ ಈ ರೀತಿಯ ಗಾಸಿಪ್ ಹಬ್ಬಲು ಕಾರಣವಾಗಿತ್ತು… ಇನ್ನು ಗಾಸಿಪ್ ಹೆಚ್ಚಾಗುತ್ತಿದ್ದಂತೆ ನಟ ವಿಜಯ ದೇವರಕೊಂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ..ಟ್ವಿಟರ್ ಮೂಲಕ ಗಾಸಿಪ್ ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ ಈಗ ಹರಡುತ್ತಿರುವ ಸುದ್ದಿ ಕಂಪ್ಲೀಟ್ ನಾನ್ಸೆನ್ಸ್ …ನಾವಿಬ್ಬರೂ ಸ್ನೇಹಿತರಷ್ಟೇ ಎಂದು ಟ್ವೀಟ್ ಮಾಡುವ ಮೂಲಕ ಅಂತೆ ಕಂತೆಗಳಿಗೆ ಬ್ರೇಕ್ ಹಾಕಿದ್ದಾರೆ… ಒಟ್ಟಾರೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ..




