- July 6, 2022
ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ


ಟಾಲಿವುಡ್ ನ ಪ್ರಸಿದ್ಧ ನಟ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ಲೈಗರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಸಂಪೂರ್ಣ ಬೆತ್ತಲೆಯಾಗಿ, ಗುಲಾಬಿ ಹೂವಿನ ಗುಚ್ಛ ಹಿಡಿದು ನಿಂತಿರುವ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ವಿಜಯ್ ದೇವರಕೊಂಡ ಅವರ ಬೋಲ್ಡ್ ಲುಕ್ ಟಾಕ್ ಆಫ್ ದಿ ಟೌನ್ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಹೆಚ್ಚಿನವರು ಈ ಪೋಸ್ಟ್ ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಅಂತೆಯೇ ಅವರ ಆಪ್ತ ಸ್ನೇಹಿತೆ ರಶ್ಮಿಕಾ ಮಂದಣ್ಣ ಕೂಡ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟರ್ ನೋಡಿ ನಾನು ವಿಸ್ಮಿತಳಾಗಿದ್ದೇನೆ ಎಂದಿರುವ ರಶ್ಮಿಕಾ, ಲೈಗರನ್ನು ಹೊಗಳಿದ್ದಾರೆ.


ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಲೈಗರ್ ಚಿತ್ರದ ವಿಜಯ್ ದೇವರಕೊಂಡ ಅವರ ಹೊಸ ಪೋಸ್ಟರ್ ನ್ನು ರಿ ಪೋಸ್ಟ್ ಮಾಡುವುದರೊಂದಿಗೆ ಅವರನ್ನು “ಸ್ಫೂರ್ತಿ” ಎಂದು ಕರೆದಿದ್ದಾರೆ. “ನನಗೆ ಸ್ಫೂರ್ತಿ ಯಾರು ಎಂದು ಕೇಳಿದಾಗ ನಾನು ಎಂದಿಗೂ ಯಾರ ಹೆಸರನ್ನೂ ಆಯ್ಕೆ ಮಾಡಿರಲಿಲ್ಲ. ಇಂದು ನಾನು ವಿಜಯ್ ದೇವರಕೊಂಡ ಅವರನ್ನು ಆಯ್ಕೆ ಮಾಡಿದ್ದೇನೆ. ಲೈಗರ್ ನಿಮಗೆ ನಮ್ಮ ಪ್ರೀತಿ ಮತ್ತು ಬೆಂಬಲವಿದೆ. ನೀವು ಏನು ಮಾಡಬಹುದು ಎನ್ನುವುದನ್ನು ಇಡೀ ದೇಶಕ್ಕೆ.. ಅಲ್ಲಲ್ಲ.. ಇಡೀ ಜಗತ್ತಿಗೆ ತೋರಿಸಿ.. ಆಲ್ ದಿ ಬೆಸ್ಟ್.” ಎಂದು ಬರೆದುಕೊಂಡಿದ್ದಾರೆ.


ಹಾಗೇ ಸಮಂತಾ, ಅನುಷ್ಕಾ ಶೆಟ್ಟಿ, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ಜಾನ್ವಿ ಕಪೂರ್ ಮತ್ತು ಇತರರು ವಿಜಯ್ ಅವರ ಹೊಸ ಪೋಸ್ಟರ್‌ಗೆ ಪ್ರತಿಕ್ರಿಯಿಸಿದ್ದಲ್ಲದೆ, ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.


ಲೈಗರ್ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಲಿದ್ದು, ವಿವಾದಗಳಿಂದಲೇ ಸುದ್ದಿಯಾಗಿದ್ದ ಬಾಕ್ಸರ್ ‘ಮೈಕ್ ಟೈಸನ್’ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ‘ಅನನ್ಯ ಪಾಂಡೆ’ ನಟಿಸುತ್ತಿದ್ದಾರೆ. ಈ ಮೊದಲು ಚಿತ್ರ ಜುಲೈ 10ರಂದು ಬಿಡುಗಡೆಯಾಗುವುದಾಗಿ ನಿಶ್ಚಯವಾಗಿತ್ತು.
ಇದೀಗ ‘ಆಗಸ್ಟ್ 25’ ರಂದು ಲೈಗರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.


ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಅವರು ದಳಪತಿ ವಿಜಯ್ ಅವರ ಮುಂದಿನ ದ್ವಿಭಾಷಾ ಚಿತ್ರ ‘ವರಿಸು’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ‘ವಂಶಿ ಪೈಡಿಪಲ್ಲಿ’ ನಿರ್ದೇಶನದ ಈ ಚಿತ್ರ ಪೊಂಗಲ್‌ಗೆ ಬಿಡುಗಡೆಯಾಗಲಿದೆ.




