- April 12, 2022
ಸತ್ಯಜೀತ್ ರೇ ಅವರೊಂದಿಗೆ ನಾನು ನಟಿಸಬೇಕಿತ್ತು ಎಂದ ಬಾಲಿವುಡ್ ಬೆಡಗಿ


ಹದಿನಾರರ ಹುಡುಗಿ ತನ್ನ ನೆಚ್ಚಿನ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ರಹಸ್ಯವಾಗಿ ಪತ್ರ ಬರೆದಿದ್ದಳು. ಅವಳು ಪೋಸ್ಟ್ ಮಾಡಿರಲಿಲ್ಲ. ಅವರು ನಿಧನ ಹೊಂದಿದಾಗ ಅವಳಿಗೆ ಹಲವು ಕಾರಣಗಳಿಂದ ಶಾಕ್ ಆಯಿತು. ಅವಳು ಬೇರ್ಯಾರು ಅಲ್ಲ. ಈಗ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಾಯಕಿ ವಿದ್ಯಾ ಬಾಲನ್.


ಸತ್ಯಜಿತ್ ರೇ ಅವರೊಂದಿಗೆ ಕೆಲಸ ಮಾಡಬೇಕೆಂಬ ಆಸೆ ಹಾಗೂ ಬೆಂಗಾಲಿ ಸಿನಿಮಾ ಅವರಿಗೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.




“ನನಗೆ ಇವತ್ತಿಗೂ ಅವರೊಂದಿಗೆ ಕೆಲಸ ಮಾಡಲು ಇಷ್ಟವಿದೆ. ಎಲ್ಲರೂ ಅವರ ಪತೇರ್ ಪಾಂಚಾಲಿ ಹಾಗೂ ಚಾರುಲತಾ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನಿರ್ದೇಶನದ ಮಹಾ ನಗರ್ ನನ್ನ ಫೇವರಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ ನನಗೆ ಆಳವಾಗಿ ಪ್ರಭಾವ ಬೀರಿದೆ. ಅವರು ಇನ್ನೂ ಬದುಕಬೇಕಿತ್ತು. ಅವರೊಂದಿಗೆ ನಾನು ಪದೇ ಪದೇ ಹಲವು ಚಿತ್ರಗಳಲ್ಲಿ ನಟಿಸಬೇಕಿತ್ತು ಎಂದು ಬಯಸುತ್ತೇನೆ” ಎಂದಿದ್ದಾರೆ.


ವಿದ್ಯಾ ಅವರು ನೋಡಲು ಬೆಂಗಾಲಿ ನಟಿ ಮಾಧವಿ ಚಟರ್ಜಿಯಂತೆ ಕಾಣುತ್ತಾರೆ ಎಂದು ಜನ ಹೇಳುತ್ತಾರಂತೆ. ಅವರು ಚಾರುಲತಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.




ಸತ್ಯಜಿತ್ ರೇ ಅವರ ದೊಡ್ಡ ಅಭಿಮಾನಿ ಆಗಿರುವ ವಿದ್ಯಾ ” ನನ್ನ ಬಳಿ ಅವರ ಸಿನಿಮಾಗಳ ಪೋಸ್ಟರ್ ಕಲೆಕ್ಷನ್ ಇದೆ. ಅವರ ಸಿನಿಮಾಗಳ ಪಾತ್ರಗಳ ಪೈಂಟಿಂಗ್ ಇವೆ. ರೇ ಅವರ ಕೆಲಸದಿಂದ ಸ್ಪೂರ್ತಿ ಪಡೆದ ಹಲವು ಡೆಕೋರೇಟಿವ್ ಪೀಸ್ ಗಳು ನನ್ನ ಮನೆಯನ್ನು ತುಂಬಿವೆ.ನನಗೆ ಬೆಂಗಾಲಿ ಸಿನಿಮಾ ಹಾಗೂ ಸಂಸ್ಕೃತಿ ಬಗ್ಗೆ ತುಂಬಾ ಗೌರವ ಇದೆ” ಎಂದಿದ್ದಾರೆ.


ವಿದ್ಯಾ ಬಾಲನ್ 2003ರಲ್ಲಿ ಭಲೋ ಥೇಕೋ ಎಂಬ ಬೆಂಗಾಲಿ ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. ಬೆಂಗಾಲಿ ಕಾದಂಬರಿ ಆಧಾರಿತ ಚಿತ್ರ ಪರಿಣೀತಾ ದ ಮೂಲಕ ಬಾಲಿವುಡ್ ಪ್ರವೇಶಿಸಿದರು.


