• April 7, 2022

ಲಿವ್ ಇನ್ ರಿಲೇಷನ್ ಶಿಪ್ ಹಾಗೂ ಮದುವೆ ಇವೆರಡೂ ಒಂದೆಯಲ್ಲ – ವಿದ್ಯಾ ಬಾಲನ್

ಲಿವ್ ಇನ್ ರಿಲೇಷನ್ ಶಿಪ್ ಹಾಗೂ ಮದುವೆ ಇವೆರಡೂ ಒಂದೆಯಲ್ಲ – ವಿದ್ಯಾ ಬಾಲನ್

ಬಾಲಿವುಡ್ ನಲ್ಲಿ ತಮ್ಮ ವಿಭಿನ್ನ ಪಾತ್ರಗಳಿಗೆ ಹೆಸರಾದವರು ವಿದ್ಯಾ ಬಾಲನ್. ಮಹಿಳಾ ಪ್ರಧಾನ ಪಾತ್ರಗಳಿಂದಲೇ ಗುರುತಿಸಿಕೊಂಡ ನಟಿ ಡರ್ಟಿ ಪಿಕ್ಚರ್, ಶಕುಂತಲಾ ದೇವಿ , ಮಿಷನ್ ಮಂಗಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಲ್ಲಿ ಹಲವು ನಟಿಯರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಾರೆ. ಆದರೆ ವಿದ್ಯಾ ಬಾಲನ್ ಇದಕ್ಕೆ ಅಪವಾದ. ಸದಾ ಬಾಡಿ ಶೇಮಿಂಗ್, ಫಿಟ್ ನೆಸ್ ಕುರಿತು ಮಾತನಾಡಿರುವ ವಿದ್ಯಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ವಿದ್ಯಾ ಬಾಲನ್ 2012ರಲ್ಲಿ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಾಂಪತ್ಯದ ಕುರಿತು ಮಾತನಾಡಿದ್ದಾರೆ. ಮದುವೆಗೂ ಮೊದಲು ವಿದ್ಯಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವುದು ಅಥವಾ ಮದುವೆ ಆಗುವುದು ಎರಡೂ ಒಂದೇ ಎಂದು ಭಾವಿಸಿದ್ದರು. ಆದರೆ ಪತಿಯಿಂದಾಗಿ ದಾಂಪತ್ಯ ಜೀವನ ವಿಶೇಷವಾಗಿದೆ ಎಂದಿದ್ದಾರೆ.

ಸಿದ್ದಾರ್ಥ್ ಅವರು ಸಾವಧಾನವಾಗಿ ಆಲಿಸುವ ವ್ಯಕ್ತಿ ಎಂದು ಹೊಗಳಿದ್ದಾರೆ. ಅವರಿಂದ ತನ್ನ ದಾಂಪತ್ಯ ಜೀವನ ಸುಂದರವಾಗಿದೆ ಎಂದಿದ್ದಾರೆ.”ಪತಿಗೆ ತುಂಬಾ ತಾಳ್ಮೆಯಿದೆ. ಇನ್ನೊಬ್ಬರ ಮಾತುಗಳನ್ನು ನನ್ನ ಪತಿಯಷ್ಟು
ತಾಳ್ಮೆಯಿಂದ ಆಲಿಸುವ ಮತ್ತೊಬ್ಬರನ್ನು ನಾನು ನೋಡಿಲ್ಲ. ಅವರೆಷ್ಟು ಕೇಳುತ್ತಾರೆ ಎಂದರೆ ನಾನು ಅವರಿಗೆ ವಿವರಿಸುತ್ತಾ ನನಗೆ ವಿಚಾರಗಳು ಸ್ಪಷ್ಟವಾಗುತ್ತದೆ. ಅವರಿಂದ ಸಲಹೆಗಳೇ ಬೇಕಾಗುವುದಿಲ್ಲ. ನನ್ನ ಜೀವನದಲ್ಲಿ ಕೆಟ್ಟ ಹಾಗೂ ಖುಷಿಯ ದಿನಗಳಲ್ಲಿ ನಾನಿದ್ದಂತೆಯೇ ಸ್ವೀಕರಿಸುತ್ತಾರೆ. ಮದುವೆಯಾಗಿ ಹತ್ತು ವರುಷಗಳು ಆಗಿವೆ. ಸಿದ್ದಾರ್ಥ್ ರಿಂದಾಗಿ ನಾನು ಮದುವೆಯನ್ನು ಹೊಗಳುತ್ತೇನೆ” ಎಂದಿದ್ದಾರೆ.

2012ರಲ್ಲಿ ಸಿದ್ದಾರ್ಥ್ ಹಾಗೂ ವಿದ್ಯಾ ಬಾಲನ್ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಇಬ್ಬರೂ ಕೂಡಾ ಫೋಟೋ ಕೂಡಾ ಅಷ್ಟಾಗಿ ಲಭ್ಯ ಇಲ್ಲ. ಕೆಲಸದ ಹೊರತಾಗಿ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ ವಿದ್ಯಾ ಬಾಲನ್.