- April 7, 2022
ಹೊಸ ಸಾಹಸಕ್ಕೆ ಮುಂದಾದ ವಸಿಷ್ಠ ಸಿಂಹ… ಏನು ಗೊತ್ತಾ?


ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ವಸಿಷ್ಠ ಸಿಂಹ ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಟ, ವಿಲನ್, ಹೀರೋ ಆಗಿ ಗುರುತಿಸಿಕೊಂಡಿರುವ ವಶಿಷ್ಠ ಸಿಂಹ ತಮ್ಮದೇ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ವಿಚಾರವನ್ನು ಅವರೇ ಘೋಷಿಸಿದ್ದಾರೆ.


“ಸಿಂಹ ಆಡಿಯೋ ” ಎಂಬ ಲೇಬಲ್ ನ್ನು ಆರಂಭಿಸಿರುವ ವಶಿಷ್ಠ ಸಿಂಹ ಅವರ ನಟನೆಯ ಕಾಲಚಕ್ರ ಸಿನಿಮಾದ ನೀನೇ ಬೇಕು ಹಾಡು ಅವರ ಸಿಂಹ ಆಡಿಯೋ ಮೂಲಕ ಎಪ್ರಿಲ್ 4ಕ್ಕೆ ರಿಲೀಸ್ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಂತಸಗೊಂಡಿದ್ದು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಈ ಆಡಿಯೋ ಲೇಬಲ್ ನಿಂದ ಇನ್ನೂ ಹೆಚ್ಚು ಹಾಡುಗಳು ಬಿಡುಗಡೆ ಆಗಲಿ ಎಂದು ಹಾರೈಸಿದ್ದಾರೆ.


ಕಾಲಚಕ್ರ ಸಿನಿಮಾದಲ್ಲಿ ವಸಿಷ್ಠ ವಿವಿಧ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ರಶ್ಮಿಕೆ ನಿರ್ದೇಶನ ಮಾಡಿದ್ದಾರೆ. ರಕ್ಷಾ , ಸುಚೇಂದ್ರ ಪ್ರಸಾದ್ , ದೀಪಕ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.


ಇನ್ನು ನಟನೆಯ ಹೊರತಾಗು ಗಾಯಕರಾಗಿಯೂ ಗುರುತಿಸಿಕೊಂಡಿರುವ ವಸಿಷ್ಠ ಕಿರಿಕ್ ಪಾರ್ಟಿ ಚಿತ್ರದ ನೀಚ ಸುಳ್ಳು ಸುತ್ತೋ ನಾಲಿಗೆ, ದಯವಿಟ್ಟು ಗಮನಿಸಿ ಚಿತ್ರದ ಮರೆತೇ ಹೋದೆನು ಮುಂತಾದ ಹಾಡುಗಳನ್ನು ಹಾಡಿದ್ದಾರೆ. ಸಂಗೀತದ ಮೇಲೆ ಆಸಕ್ತಿ ಹೊಂದಿರುವ ಕಾರಣ ಈ ಸಂಸ್ಥೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.






