• February 2, 2022

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?

ಚಿತ್ರರಂಗದಲ್ಲಿ ಕೆಲವರು ಒಂದೇ ಸಿನಿಮಾಕ್ಕೆ ಕ್ಲಿಕ್ ಆಗಿಬಿಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಆ ಅದೃಷ್ಟದ ಬಾಗಿಲು ತೆರೆಯೋದೇ ಇಲ್ಲ. ಸಾಲು ಸಾಲು ಸಿನಿಮಾಗಳ ಜೊತೆಗೆ ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೂ ಕೂಡಾ ನಸೀಬೂ ಚೆನ್ನಾಗಿರಬೇಕು ಎಂಬ ಅಭಿಪ್ರಾಯನೂ ಇದೆ. ಇದೆಲ್ಲಾ ಕೂಡಿಬಂದಿದ್ದು ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡುತ್ತಿರುವ ಪೋರಿ ಯಶಾ ಶಿವರಾಮ್‌ಕುಮಾರ್ ಇವರಿಗೆ.

ಪದವಿ ಪೂರ್ವ ಸಿನಿಮಾದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಯಶ ಶಿವಕುಮಾರ್ ಮುಂದೆ
ಬಹಾದ್ದೂರ್ ಗಂಡು, ದಂತಕಥೆ, ಬೈರಾಗಿ ಹೀಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವ ಚೆಲುವೆ. ಯಶ ಅಭಿನಯದ ಮೊದಲ ಸಿನಿಮಾ ಬಿಡುಗಡೆಯಾಗುವ ಮೊದಲೇ ಬೇರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವ ಈಕೆ ಈಗ ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿನಯದ ಗಣ ಸಿನಿಮಾದಲ್ಲಿ ನಟಿಸಲಿರುವ ಯಶ ಶಿವಕುಮಾರ್ ಸಕತ್ ಖುಷಿಯಲ್ಲಿದ್ದಾರೆ.
ಗಣ ಸಿನಿಮಾದಲ್ಲಿ ಅರ್ಚನಾ ಕೊಟ್ಟಿಗೆ ಹಾಗೂ ವೇದಿಕಾ ನಟಿಸಲಿದ್ದು ಆ ಸಾಲಿಗೆ ಹೊಸದಾಗಿ ಸೇರಿದ್ದಾರೆ ಯಶ. ಆ್ಯಕ್ಷನ್ ಮೂವೀ ಇದಾಗಿದ್ದು ಪ್ರೇಕ್ಷಕ ವಲಯದಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಜೈ ಆನಂದ್ ಅವರ ಸಿನಿಮಾಟೋಗ್ರಾಫಿ ಚಿತ್ರಕ್ಕಿದ್ದು ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಇನ್ನು ಯಶ ಅವರ ಆರಂಭಿಕ ಜೀವನದ ವಿಚಾರದ ಕಡೆ ಬಂದರೆ ಅವರು ಓದಿದ್ದು ಇಂಜಿನಿಯರಿಂಗ್. ಆದರೆ ಕೈಬೀಸಿ ಕರೆದ ಕ್ಷೇತ್ರ ಮಾತ್ರ ಮಾಡೆಲಿಂಗ್. ನಂತರ ನಟನೆಗೆ ಧುಮುಕಿದರು. ಅದಲ್ಲದೇ ಭರತನಾಟ್ಯಂ ನೃತ್ಯಗಾರ್ತಿಯೂ ಕೂಡಾ ಹೌದು.

ಕನ್ನಡದಲ್ಲಿ ಸದ್ಯಕ್ಕೆ ಬಹುಬೇಡಿಕೆ ಇರುವ ನಟಿಯರ ಸಾಲಿಗೆ ಯಶ ಸೇರುತ್ತಾರೆ ಎಂದರೆ ತಪ್ಪಾಗಲಾರದು. ತುಳು ಸಿನಿಮಾದಲ್ಲಿ ಕೂಡಾ ತಮ್ಮ ಛಾಪನ್ನು ಮೂಡಿಸಲು ಹೊರಟಿರುವ ಈ ಬೆಡಗಿ ರಾಜ್‌ ಸೌಂಡ್ಸ್ ಆ್ಯಂಡ್ ಲೈಟ್ಸ್ ಎಂಬ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.