• April 19, 2022

ಸಿನಿಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ…

ಸಿನಿಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ…

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರಿ ಫೈಲ್ಸ್” ಚಿತ್ರ ಭಾರತದಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಚಿತ್ರಕ್ಕೆ ಪ್ರಧಾನಿ ಮೋದಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಈ ಸಿನಿಮಾದ ಕುರಿತು ಹೊಸ ಸುದ್ದಿ ಬಂದಿದೆ. ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಈಗ ಬೇರೆ ಭಾಷೆಗಳಲ್ಲಿ ಡಬ್ ಆಗಿದೆ. ಹೀಗಾಗಿ ತಮ್ಮ ಭಾಷೆಯಲ್ಲಿ ಈ ಚಿತ್ರ ವೀಕ್ಷಿಸಬಹುದು.

1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಘಟನೆಯ ಆಧಾರಿತವಾದ ಈ ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಸಿನಿಮಾವನ್ನು ಪ್ರಧಾನಿ ಮೋದಿ ನೋಡಿ ಮೆಚ್ಚಿದ್ದರು. ಹಲವು ರಾಜ್ಯಗಳಲ್ಲಿ ಈ ಚಿತ್ರಕ್ಕೆ ವಿನಾಯಿತಿ ಘೋಷಿಸಲಾಗಿತ್ತು. ಈಗ ಇನ್ನಷ್ಟು ಜನರಿಗೆ ಈ ಸಿನಿಮಾ ತಲುಪಲು ಆಯಾಯ ಭಾಷೆಗಳಲ್ಲಿ ಚಿತ್ರ ಬರಲಿದೆ.

ಕನ್ನಡಕ್ಕೆ ಡಬ್ ಆಗುತ್ತಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಜೀ 5 ಒಟಿಟಿಯಲ್ಲಿ ಬರಲಿದೆ. ಜೀ 5 ವೀಕ್ಷಕರಿಗೆ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕನ್ನಡಿಗ ಪ್ರಕಾಶ್ ಬೆಳವಾಡಿ ನಟಿಸಿರುವ ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ , ಪಲ್ಲವಿ ಜೋಶಿ ಮುಂತಾದ ಕಲಾವಿದರು ಕೂಡಾ ನಟಿಸಿದ್ದಾರೆ.