• March 15, 2022

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿದ ಯಾಮಿ ಗೌತಮ್ ಹೇಳಿದ್ದೇನು ಗೊತ್ತಾ?

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿದ ಯಾಮಿ ಗೌತಮ್ ಹೇಳಿದ್ದೇನು ಗೊತ್ತಾ?

ಮೊನ್ನೆಯಷ್ಟೇ ರಿಲೀಸ್ ಆಗಿ ಭಾರತೀಯರ ಮನಗೆದ್ದಿರುವ “ದಿ ಕಾಶ್ಮೀರಿ ಫೈಲ್ಸ್ ” ಸಿನಿಮಾದ ಬಗ್ಗೆ ಎಲ್ಲರೂ ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲ ಈಗಾಗಲೇ ಈ ಚಿತ್ರ ನೋಡಿರುವ ಹಲವು ಸೆಲೆಬ್ರಿಟಿಗಳು ಕೂಡ ಈ ಸಿನಿಮಾದ ಕಥೆಗೆ ಫಿದಾ ಆಗಿದ್ದರೂ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಕೂಡಾ ಸಿನಿಮಾವನ್ನು ಮನಸಾರೆ ಮೆಚ್ಚಿದ್ದಾರೆ. ಕರ್ನಾಟಕ ಸೇರಿದಂತೆ ಗುಜರಾತ್, ಹರಿಯಾಣ ಹಾಗೂ ಮಧ್ಯಪ್ರದೇಶಗಳಲ್ಲಿಯೂ ವಿನಾಯಿತಿ ಘೋಷಿಸಲಾಗಿದೆ.

“ದಿ ಕಾಶ್ಮೀರಿ ಫೈಲ್ಸ್ ” ಚಿತ್ರ ನೋಡಿದ ಹಲವು ಸೆಲೆಬ್ರಿಟಿಗಳು ಹಾಗೂ ವಿಮರ್ಶಕರು ಜನರಿಗೆ ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ. ಇದೀಗ ಬಾಲಿವುಡ್ ನಟಿ ಯಾಮಿ ಗೌತಮ್ ಕೂಡಾ ಚಿತ್ರ ನೋಡುವಂತೆ ಟ್ವೀಟ್ ಮಾಡಿದ್ದಾರೆ.

“ನಾನು ಕಾಶ್ಮೀರ ಪಂಡಿತ್ ನನ್ನು ಮದುವೆ ಆಗಿದ್ದೇನೆ. ಈ ಸಮುದಾಯದವರ ಮೇಲೆ ನಡೆದಿರುವಂತಹ ದೌರ್ಜನ್ಯವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಂದ ಹಾಗೇ ಕಾಶ್ಮೀರ ಪಂಡಿತರ ನರಮೇಧದ ಬಗ್ಗೆ ನಮ್ಮ ದೇಶದ ಜನರಿಗೆ ಯಾವುದೇ ರೀತಿಯ ಮಾಹಿತಿ ಇಲ್ಲದಿರುವುದು ನಿಜವಾಗಿಯೂ ಬೇಸರದ ವಿಷಯವೇ ಸರಿ. ಬರೋಬ್ಬರಿ 32 ವರ್ಷಗಳ ನಂತರ ಕಾಶ್ಮೀರ ಪಂಡಿತರ ನೋವನ್ನು ಜನರಿಗೆ ತಲುಪಿಸುವ ಸಿನಿಮಾ ಬಂದಿದೆ. ಇದಕ್ಕಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ನಟ ಅನುಪಮ್ ಖೇರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

1990ರ ನಂತರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಆಗಿರುವಂತಹ ದೌರ್ಜನ್ಯ ಹಾಗೂ ಹತ್ಯಾಕಾಂಡದ ಚಿತ್ರಣವನ್ನು ಈ ಚಿತ್ರ ಪ್ರಸ್ತುತ ಪಡಿಸಿದ್ದು ಇದರಲ್ಲಿ ಅನುಪಮ್ ಖೇರ್ , ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಮುಂತಾದ ಕಲಾವಿದರು ನಟಿಸಿದ್ದಾರೆ.