• July 12, 2022

ವೈರಲ್ ಆದ ರಾಧಿಕಾ ಪಂಡಿತ್ ಪೋಸ್ಟ್

ವೈರಲ್ ಆದ ರಾಧಿಕಾ ಪಂಡಿತ್ ಪೋಸ್ಟ್

ಕನ್ನಡ ಚಿತ್ರರಂಗದ ಅದ್ಭುತ ಜೋಡಿಗಳಲ್ಲಿ ಯಶ್ ರಾಧಿಕಾ ಕೂಡ ಒಬ್ಬರು. ಸಿನಿ ಜರ್ನಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಮಾದರಿ ದಂಪತಿಯಾಗಿ ಬದುಕುತ್ತಿರುವ ಇವರು ಇಬ್ಬರು ಮುದ್ದಾದ ಮಕ್ಕಳ ತಂದೆ ತಾಯಿಯೂ ಹೌದು.

ಈಗ ಈ ವಿಷಯ ಯಾಕೆಂದರೆ ನಟಿ ರಾಧಿಕಾ ಪಂಡಿತ್ ತಮ್ಮ ಕುಟುಂಬದ ಜೊತೆಗಿನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದಿಂದ ದೂರವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಾಧಿಕಾ ತಮ್ಮ ಕುಟುಂಬದ ಆಗುಹೋಗುಗಳನ್ನು, ಸಂತೋಷದ ಕ್ಷಣಗಳನ್ನು ಸಾಧಾರಣವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಾಧಿಕಾ ಪಂಡಿತ್ ದಶಕದ ಕಾಲ ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಮಿಂಚಿದವರು. ನಂತರ ನಟ ಯಶ್ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯೂ ಆದರು. ‘ಆದಿಲಕ್ಷ್ಮಿ ಪುರಾಣ’ ಸಿನಿಮಾದ ಬಳಿಕ ಅವರು ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಕೌಟುಂಬಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿರುವ ರಾಧಿಕಾ ಪಂಡಿತ್ ಅವರ ಪೋಸ್ಟ್ ಗಳು ಕೂಡ ಅಷ್ಟೇ ಬೇಗ ವೈರಲ್ ಆಗುತ್ತವೆ. ಈಗ ಹೊಸದಾಗಿ ಹಂಚಿಕೊಂಡಿರುವ ಫೋಟೋದಲ್ಲಿ ರಾಧಿಕಾ ಪಂಡಿತ್ ಜೊತೆಗೆ ಅವರ ಪತಿ ಮತ್ತು ಇಬ್ಬರು ಮಕ್ಕಳಾದ ಐರಾ ಮತ್ತು ಯಥರ್ವ ಕೂಡ ಇದ್ದಾರೆ. ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡ ರಾಧಿಕಾ ಇದು ತಮಗೆ ಯಾಕೆ ವಿಶೇಷ ಎಂಬುದನ್ನೂ ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ರಾಧಿಕಾ ಹಂಚಿಕೊಳ್ಳುತ್ತಿರುವ 500ನೇ ಪೋಸ್ಟ್ ಇದು. ಹಾಗಾಗಿ ಈ ಫೋಟೋ ವಿಶೇಷವಾಗಿರಬೇಕು ಎಂಬ ಕಾರಣಕ್ಕಾಗಿ ತಮ್ಮ ಫ್ಯಾಮಿಲಿ ಪಿಕ್ ಅನ್ನು ಹಂಚಿಕೊಂಡಿದ್ದಾರೆ. ”ಇದು ನನ್ನ 500ನೇ ಫೋಟೋ ಇದು ವಿಶೇಷವಾಗಿರಲಿ” ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.

ಇತ್ತೀಚೆಗಂತೂ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಪಂಡಿತ್ ಅವರು ಮತ್ತೆ ಸಿನಿಮಾಗೆ ಮರಳಿ ಬರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ತಾವು ಹಿಂತಿರುಗಿ ಬರುವ ಕುರಿತು ರಾಧಿಕ ಪಂಡಿತ್ ಯಾವುದೇ ಸೂಚನೆ ನೀಡಿಲ್ಲ. ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟಿಯ ಮತ್ತೊಂದು ಸಿನಿಮಾ ನೋಡಲು ಕಾತುರರಾಗಿದ್ದಾರೆ.