• November 23, 2021

ಕಿರುತೆರೆ ಕಲಾವಿದರಿಂದ ಪುನೀತ್ ನೆನಪಿನಲ್ಲಿ ಅಪ್ಪು ಅಮರ ಕಾರ್ಯಕ್ರಮ

ಕಿರುತೆರೆ ಕಲಾವಿದರಿಂದ ಪುನೀತ್  ನೆನಪಿನಲ್ಲಿ ಅಪ್ಪು ಅಮರ ಕಾರ್ಯಕ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಾಕಷ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು …ಕನ್ನಡದ ಕೋಟ್ಯಾಧಿಪತಿ ಫ್ಯಾಮಿಲಿ ಪವರ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವುದರ ಜತೆಗೆ ತಮ್ಮದೇ ಬ್ಯಾನರ್ ಅಡಿಯಲ್ಲಿ ಧಾರಾವಾಹಿಗಳನ್ನು ನಿರ್ಮಿಸಿದ್ದರು …

ಈಗಾಗಲೇ ಕಲಾವಿದರು ಹಾಗೂ ವಾಣಿಜ್ಯ ಮಂಡಳಿ ಕಡೆಯಿಂದ ಅಪ್ಪು ನುಡಿ ನಮನ ಎಂಬ ಕಾರ್ಯಕ್ರಮವನ್ನು ಮಾಡುವ ಮೂಲಕ ಪುನೀತ್ ಅವರಿಗೆ ಗೌರವ ಅರ್ಪಿಸಲಾಗಿದೆ …ಈಗ ಕಿರುತೆರೆ ಕಲಾವಿದರ ಅಸೋಸಿಯೇಷನ್ ಕಡೆಯಿಂದ ಪುನೀತ್ ಹೆಸರಲ್ಲಿ “ಅಪ್ಪು ಅಮರ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರಡ ಈಗಾಗಲೇ ರಾಜ್ಕುಮಾರ್ ಮನೆಯವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು..ನ.28ರಂದು ಸಂಜೆ 4 ಗಂಟೆಗೆ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ವತಿಯಿಂದ ‘ಅಪ್ಪು ಅಮರ’ ಕಾರ್ಯಕ್ರಮ ಆಯೋಜಿಸಲಿದ್ದು, ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಇದು ನಡೆಯಲಿದೆ.