• May 16, 2022

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸನ್ನಿ ಲಿಯೋನ್

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸನ್ನಿ ಲಿಯೋನ್

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಮೇ 13ರಂದು 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ನ ಹುಟ್ಟುಹಬ್ಬದ ಸಂದರ್ಭದಂದು ಮಂಡ್ಯದ ಯುವಕರು ರಕ್ತದಾನ ಶಿಬಿರ ಆಯೋಜಿಸಿದ್ದಾರೆ.

ಇನ್ಸ್ಟಾ ಗ್ರಾಂ ನಲ್ಲಿ ಸನ್ನಿ ಲಿಯೋನ್ ಈ ನ್ಯೂಸ್ ಆರ್ಟಿಕಲ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ.”ಓ ಮೈ ಗಾಡ್, ಇದನ್ನು ನಂಬಲಾಗುತ್ತಿಲ್ಲ. ನಿಮ್ಮ ಈ ಕಾರ್ಯಕ್ಕೆ ಗೌರವ ಸಲ್ಲಿಸಲು ನಾನು ಕೂಡಾ ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು. ನೀವೆಲ್ಲರೂ ವಿಶೇಷ ಭಾವನೆ ಬರುವಂತೆ ಮಾಡಿದ್ದೀರಿ. ಲವ್ ಯೂ” ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಆಚರಿಸಿದ್ದರು. ಇದರ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ನನ್ನ ಬರ್ತ್ ಡೇ . ಪಾರ್ಟಿ ಕೊಟ್ಟಿರುವುದಕ್ಕೆ ನನ್ನ ಪ್ರೀತಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಸದ್ಯ ತೆಲುಗಿನಲ್ಲಿ ವಿಷ್ಣು ಮಂಚು ಅವರೊಂದಿಗೆ ನಟಿಸುತ್ತಿದ್ದಾರೆ