• June 10, 2022

ಸುದೀಪ್ ಗೆ ಬ್ಯಾಟ್ ನೀಡಿದ ಜೋಸ್ ಬಟ್ಲರ್

ಸುದೀಪ್ ಗೆ ಬ್ಯಾಟ್ ನೀಡಿದ ಜೋಸ್ ಬಟ್ಲರ್

ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಹಾಗೂ ಇಂಗ್ಲೆಂಡ್ ತಂಡದ ಕ್ರಿಕೆಟಿಗ ಜೋಸ್ ಬಟ್ಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವರ್ಷದ ಅಂದರೆ 2022 ರ 15ನೇ ಐಪಿಎಲ್ ಆವೃತ್ತಿಯಲ್ಲಿ ತಾನು ಆಡಿದ್ದ ಬ್ಯಾಟ್ ಮೇಲೆ ತಮ್ಮ ಸಹಿ ಹಾಕಿರುವ ಜೋಸ್ ಬಟ್ಲರ್ ಆ ಬ್ಯಾಟ್ ನಲ್ಲಿ ಕಿಚ್ಚನಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿದ್ದಾರೆ. ಇದನ್ನು ಸ್ವತಃ ಕಿಚ್ಚ ಅವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ನಟನೆಯ ಹೊರತಾಗಿ ಕ್ರಿಕೆಟ್ ಆಟಗಾರನಾಗಿಯೂ ಕಿಚ್ಚ ಸುದೀಪ್ ಗುರುತಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಸುದೀಪ್ ಆಟ ಆಡಿದ್ದು ಇದೀಗ ಆ ಫೋಟೊವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್ಟರ್ ನಲ್ಲಿ ಹಂಚಿಕೊಂಡಿದೆ.

ಜೋಸ್ ಬಟ್ಲರ್ ಅವರಿಂದ ಬ್ಯಾಟ್ ಪಡೆದುಕೊಂಡಿರುವ ಸುದೀಪ್ ವಿಡಿಯೋ ಮೂಲಕ ಧನ್ಯವಾದ ಹೇಳಿದ್ದಾರೆ‌. “ನಾನು ಇದನ್ನು ಎಂದಿಗೂ ನಿರೀಕ್ಷೆ ಮಾಡಲಿಲ್ಲ. ನನಗೆ ನಿಜವಾಗಿಯೂ ತುಂಬಾ ಆಶ್ಚರ್ಯವಾಯಿತು. ಇದೆಲ್ಲಾ ಸಾಧ್ಯವಾದುದು ರಾಜಸ್ಥಾನ್ ರಾಯಲ್ಸ್ ತಂಡದಿಂದ. ಆ ತಂಡಕ್ಕೆ ನನ್ನ ಪರವಾಗಿ ಧನ್ಯವಾದಗಳು. ಸ್ನೇಹಿತ ಕೆಸಿ ಕಾರ್ಯಪ್ಪಗೂ ಕೂಡಾ ಧನ್ಯವಾದಗಳು” ಎಂದಿದ್ದಾರೆ.

“ಜೋಸ್ ಬಟ್ಲರ್ ಅವರು ತಮ್ಮ ಸಹಿ ಮಾಡಿರುವಂತಹ ಬ್ಯಾಟ್ ಅನ್ನು ನನಗೆ ನೀಡಿದ್ದಾರೆ. ಅದಕ್ಕೆ ತುಂಬಾ ಥ್ಯಾಂಕ್ಸ್. ಇದು ನನ್ನ ಪಾಲಿಗೆ ವಿಶೇಷವಾದ ಉಡುಗೊರೆ. ಇದನ್ನು ನಾನು ಸ್ವೀಕರಿಸಿದ್ದೇನ” ಎಂದು ಹೇಳಿದ್ದಾರೆ ಸುದೀಪ್.