• March 10, 2022

ಪತ್ನಿಯಿಂದ ವಿಚ್ಛೇದನ ಪಡೆದ ಸ್ಟಾರ್ ನಿರ್ದೇಶಕ

ಪತ್ನಿಯಿಂದ ವಿಚ್ಛೇದನ ಪಡೆದ ಸ್ಟಾರ್ ನಿರ್ದೇಶಕ

ಇತ್ತೀಚಿನ ದಿನಗಳಲ್ಲಿ ಭಾರತೀಯ ಸಿನೆಮಾರಂಗದಲ್ಲಿ ವಿಚ್ಛೇದನ ಪಡೆಯುತ್ತಿರುವುದು ಹೆಚ್ಚಾಗುತ್ತಿದೆ …ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರೇ ವಿಚ್ಚೇದನ ಪಡೆದು ತಾವೇ ಇಷ್ಟಪಟ್ಟು ವಿವಾಹವಾಗಿದ್ದವರಿಂದ ದೂರವಾಗ್ತಿದ್ದಾರೆ…ಇತ್ತೀಚೆಗಷ್ಟೇ ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದುಕೊಂಡಿದ್ದರು.. ಅದಾದ ನಂತರ ನಟ ಧನುಷ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆದರು… ಈಗ ಕಾಲಿವುಡ್ ನ ಪ್ರಖ್ಯಾತ ನಿರ್ದೇಶಕ ನಿರ್ದೇಶಕ ಬಾಲ ಅವರು ಪತ್ನಿ ಮುತ್ತುಮಲಾರ್ (ಮಲಾರ್) ಜತೆ ವಿಚ್ಛೇದನ ಪಡೆದಿದ್ದಾರೆ.

ಸದ್ಯ ಚಿತ್ರರಂಗದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಇವರಿಬ್ಬರೂ ಈಗಾಗಲೇ 4 ವರ್ಷಗಳಿಂದ ಬೇರೆ ಬೇರೆ ವಾಸ ಮಾಡುತ್ತಿದ್ದರು… ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದ್ದ ಕಾರಣ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದುಬಂದಿದೆ …

4ವರ್ಷದ ಹಿಂದೆಯೇ ವಿಚ್ಛೇದನ ಪಡೆಯಬೇಕು ಎಂದು ನಿರ್ಧರಿಸಿದ ಇವರು ನಂತರ ಒಟ್ಟಾಗಿ ಕಾಣಿಸಿಕೊಳ್ಳಲೇ ಇಲ್ಲ… ಬಾಲ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರೆ.. ಮಲರ್ ಸಂಗೀತಲೋಕದಲ್ಲಿ ಬ್ಯುಸಿ ಆದರು…

ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿ ಕೆಲವು ಸಮಯ ಕಳೆದಿತ್ತು. ಮಾರ್ಚ್ 5ರಂದು ಇವರ ವಿಚ್ಛೇದನ ಅಧಿಕೃತವಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣ ಡಿವೋರ್ಸ್ ಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ …