• April 8, 2022

ಮಗುವನ್ನು ಬರಮಾಡಿಕೊಂಡ ಸ್ಟಾರ್ ದಂಪತಿ

ಮಗುವನ್ನು ಬರಮಾಡಿಕೊಂಡ ಸ್ಟಾರ್ ದಂಪತಿ

ಕಾಮಿಡಿಯನ್ ಭಾರತಿ ಸಿಂಗ್ ಹಾಗೂ ಹರ್ಷ್ ಲಿಂಬಾಚಿಯಾ ಅವರು ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಹೌದು, ಭಾರತಿ ಸಿಂಗ್ ಅವರು ಮುದ್ದು ರಾಜಕುಮಾರನನ್ನು ಬರಮಾಡಿಕೊಂಡಿದ್ದು ಇವರಿಗೆ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಶುಭ ಹಾರೈಸಿದ್ದಾರೆ.

ಹುನಾರ್ಬಾಝ್ ರಿಯಾಲಿಟಿ ಶೋವನ್ನು ಭಾರತಿ ಹಾಗೂ ಪತಿ ಹರ್ಷ್ ನಿರೂಪಣೆ ಮಾಡುತ್ತಿದ್ದರು. ಈ ಶೋವಿನಲ್ಲಿ ಪರಿಣಿತಿ ಚೋಪ್ರಾ, ಮಿಥುನ್ ಚಕ್ರವರ್ತಿ ಕರಣ್ ಜೋಹರ್ ತೀರ್ಪುಗಾರರಾಗಿದ್ದು ಇತ್ತೀಚೆಗಿನ ಒಂದು ಸಂಚಿಕೆಯಲ್ಲಿ ಕರಣ್ ಜೋಹರ್ ” ಇಬ್ಬರಿಗೂ ಶುಭಾಶಯಗಳು. ನಿಮ್ಮಿಬ್ಬರಿಗೂ ಇಲ್ಲೇ ಮಗು ಹುಟ್ಟುತ್ತದೆ ಎಂದು ಭಯ ಶುರುವಾಗಿದೆ” ಎಂದಿದ್ದರು.

ನಿಮ್ಮ ಕೆಲಸವೇ ನಿಮ್ಮ ಧರ್ಮ ಎಂದು ಶಾರುಕ್ ಖಾನ್ ಹೇಳಿದಂತೆ ಮಗುವಿಗೆ ಜನ್ಮ ನೀಡುವವರೆಗೂ ಭಾರತಿ ಸಿಂಗ್ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಕೆಲಾದ ಮೇಲೆ ಭಾರತಿ ಅವರಿಗೆ ಇರುವ ಪ್ರೀತಿ, ಗೌರವವನ್ನು ನೋಡಿ ಹಲವರು ಮೆಚ್ಚಿಕೊಂಡಿದ್ದರು.

ಇನ್ನು ಮಗು ಹುಟ್ಟುವ ತನಕವೂ ಕಿರುತೆರೆಯಲ್ಲಿ ಬ್ಯುಸಿಯಾಗಿರುತ್ತಿದ್ದ ಭಾರತಿ ಸಿಂಗ್ “ನನ್ನ ಮಗು ಹೊಟ್ಟೆಯಲ್ಲಿ ಎಂಜಾಯ್ ಮಾಡುತ್ತಿದೆ. ಏಕಕಾಲಕ್ಕೆ ಎರಡು ಶೋ ನಡೆಸಿಕೊಡುತ್ತಿದ್ದೇನೆ. ಹೀಗಾಗಿ ಮಗು ಸೂಪರ್ ಟ್ಯಾಲೆಂಟೆಡ್ ಆಗಿರುವುದರಲ್ಲಿ ಸಂಶಯವಿಲ್ಲ ” ಎಂದು ಹೇಳಿದ್ದರು.

ಅಂದ ಹಾಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೊದಲು ಭಾರತಿ ಸಿಂಗ್ ಹಾಗೂ ಹರ್ಷ್ ಅವರು ಬರೋಬ್ಬರಿ ಏಳು ವರ್ಷಗಳ ಕಾಲ ಡೇಟ್ ಮಾಡುತ್ತಿದ್ದರು. ಸ್ನೇಹಿತರಾಗಿ ಪರಿಚಿತರಾಗಿದ್ದ ಇವರ ಸಂಬಂಧ ಸಮಯ ಕಳೆದಂತೆ ಪ್ರೀತಿಗೆ ತಿರುಗಿತು. ಅಂದ ಹಾಗೇ ಕಾಮಿಡಿ ಸರ್ಕಸ್‌ ರಿಯಾಲಿಟಿ ಶೋವಿನಲ್ಲಿ ಇಬ್ಬರೂ ಭೇಟಿಯಾದರು. ಭಾರತಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಸೇರಿದರೆ, ಹರ್ಷ್ ಚಿತ್ರಕಥೆಗಾರರಾಗಿದ್ದರು. ಈ ಕಾರ್ಯಕ್ರಮದ ವೇಳೆ ಇಬ್ಬರೂ ಸ್ನೇಹಿತರಾದರು.

ಒಂದು ವರ್ಷದ ಗೆಳೆತನದ ನಂತರ ಹರ್ಷ್ ಭಾರತಿಯನ್ನು ಇಷ್ಟಪಡಲಾರಂಭಿಸಿದರು. ಒಂದು ದಿನ ಹರ್ಷ ಭಾರತಿಗೆ ಪ್ರಪೋಸ್ ಮಾಡಿದರು. ಆದರೆ, ಅದು ನಿಜವೋ ಅಥವಾ ತಮಾಷೆಯೋ ಎಂದು ಭಾರತಿಗೆ ಅರ್ಥವಾಗಿರಲಿಲ್ಲ. ದಪ್ಪಗಿದ್ದ ಭಾರತಿ ಹರ್ಷ್ ಅಂತ ವ್ಯಕ್ತಿ ಪ್ರಪೋಸ್ ಮಾಡ್ತಾರೆ, ತೆಳ್ಳಗಿರುವ ವ್ಯಕ್ತಿಯನ್ನು ಮದುವೆ ಆಗುತ್ತೇನೆ ಎಂದು ಯಾವಾಗಲು ಅಂದುಕೊಂಡಿರಲಿಲ್ಲ ಎಂದು ಈ ಹಿಂದೆ ಹೇಳಿದ್ದರು.