- April 21, 2022
‘ತೊತಾಪುರಿ’ಯ ಲೋಕಾರ್ಪಣೆ ಸ್ಟಾರ್ ನಟನಿಂದ


ನವರಸ ನಾಯಕ ಜಗ್ಗೇಶ್ ಅವರು ಅಭಿನಯಿಸಿರುವಂತ ಮುಂದಿನ ಚಿತ್ರ ‘ತೊತಾಪುರಿ’ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ‘ನೀರ್ ದೋಸೆ’ ಸಿನಿಮಾ ಖ್ಯಾತಿಯ, ವಿಜಯ್ ಪ್ರಸಾದ್ ಅವರು ರಚಿಸಿ-ನಿರ್ದೇಶಿಸಿರುವ ಈ ಚಿತ್ರದ ಮೂಲಕ ಮತ್ತೊಮ್ಮೆ ವಿಜಯ್ ಪ್ರಸಾದ್ ಹಾಗು ಜಗ್ಗೇಶ್ ಅವರ ಜೋಡಿ ಜನರನ್ನ ಮೋಡಿ ಮಾಡಲು ಸಜ್ಜಾಗಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧವಾಗಿದೆ. ಈ ಬಾರಿ ಟ್ರೈಲರ್ ಬಿಡುಗಡೆ ಮಾಡುವವರು ಬೇರಾರು ಅಲ್ಲದೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಆಗಿರಲಿದ್ದಾರೆ.




ಕೆ ಎ ಸುರೇಶ ಅವರು ನಿರ್ಮಾಣ ಮಾಡುತ್ತಿರೋ ‘ತೊತಾಪುರಿ’ ಚಿತ್ರ ಎರಡು ಅಧ್ಯಾಯಗಳಲ್ಲಿ ಬಿಡುಗಡೆಯಾಗಲಿದೆ. 2019ರಲ್ಲೇ ಚಿತ್ರೀಕರಣ ಮುಗಿಸಿಕೊಂಡ ಮೊದಲನೇ ಅಧ್ಯಾಯ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ನವರಸ ನಾಯಕ ಜಗ್ಗೇಶ್ ಅವರು ನಾಯಕ ನಟರಾದರೆ, ಅದಿತಿ ಪ್ರಭುದೇವ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇವರಷ್ಟೇ ಅಲ್ಲದೇ, ದತ್ತಣ್ಣ, ಧನಂಜಯ, ಸುಮನ ರಂಗನಾಥ್ ಹಾಗು ವೀಣಾ ಸುಂದರ್ ಮುಂತಾದ ಮೇರುನಟರು ಚಿತ್ರದಲ್ಲಿರಲಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕೆ ಲಭಿಸಿದೆ.




ಇಂದು(ಏಪ್ರಿಲ್ 21) ಮಧ್ಯಾಹ್ನ 1ಕ್ಕೆ ಯೂಟ್ಯೂಬ್ ನ ‘ಮೂನ್ ಲೈಟ್ ಆಡಿಯೋಸ್’ ಚಾನೆಲ್ ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಬಾದ್ ಷಾ ಕಿಚ್ಚ ಸುದೀಪ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.








