• June 28, 2022

ದಿಲ್ ಖುಷ್ ಎಂದ ಸ್ಪಂದನಾ ಸೋಮಣ್ಣ

ದಿಲ್ ಖುಷ್ ಎಂದ ಸ್ಪಂದನಾ ಸೋಮಣ್ಣ

ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕರು ಇಂದು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾಮೂಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾನೂ ನನ್ನ ಕನಸು ಧಾರಾವಾಹಿಯಲ್ಲಿ ನಾಯಕಿ ಅನು ಆಗಿ ಅಭಿನಯಿಸಿದ್ದ ಸ್ಪಂದನಾ ಸೋಮಣ್ಣ ಇದೀಗ ಹಿರಿತೆರೆಗೆ ಹಾರಿದ್ದು, ‘ದಿಲ್ ಖುಷ್’ ಎಂದಿದ್ದಾರೆ.

ಪ್ರಮೋದ್ ಜಯ ನಿರ್ದೇಶನದ ದಿಲ್ ಖುಷ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸ್ಪಂದನಾ “ನಾನು ನನ್ನ ಕನಸು ಧಾರಾವಾಹಿಯ ಮೂಲಕ ನಟನಾ ಪಯಣ ಶುರುವಾಯಿತು. ದಿಲ್ ಖುಷ್ ನನ್ನ ಮೊದಲ ಸಿನಿಮಾ. ಪ್ರಸ್ತುತ ಕಾಲದ ಹುಡುಗಿಯರು ಯಾವ ರೀತಿಯಾಗಿ ಇರುತ್ತಾರೋ ಅಂತಹದ್ದೇ ಪಾತ್ರ ದೊರಕಿತು. ನಿರ್ದೇಶಕರು ಕಥೆ ಹೇಳಿದ ಕೂಡಲೇ ನನಗೆ ಖುಷಿಯಾಗಿ ಒಪ್ಪಿಕೊಂಡೆ” ಎನ್ನುತ್ತಾರೆ.

ಇನ್ನು ಪ್ರಮೋದ್ ಜಯ ಅವರಿಗೆ ನಿರ್ದೇಶನದ ಮೊದಲ ಸಿನಿಮಾ ಹೌದು. ಇದರ ಬಗ್ಗೆ ಮಾತನಾಡಿರುವ ಪ್ರಮೋದ್ ಜಯ ” ದಿಲ್ ಖುಷ್ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು ಇದರಲ್ಲಿ ನನ್ನ ಬದುಕಿನ ಒಂದಷ್ಟು ಅನುಭವಗಳನ್ನು ಜೊತೆಗೆ ಕಂಡ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರ ನಿರ್ದೇಶಿಸಿದ್ದೇನೆ. ದಿಲ್ ಖುಷ್ ನಲ್ಲಿ 90% ನಷ್ಟು ಮನರಂಜನೆ ಇದ್ದರೆ, 10%ನಷ್ಟು ಭಾವನಾತ್ಮಕ ದೃಶ್ಯಗಳಿವೆ”ಎಂದಿದ್ದಾರೆ