- March 19, 2022
ರಾಜಕಾರಿಣಿಯಾಗಿ ತೆರೆ ಮೇಲೆ ಬರಲಿದ್ದಾರೆ ಸೋನು ಗೌಡ


ರಾಜನಂದಿನಿ ಆಗಿ ಕಿರುತೆರೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ನಟಿ ಸೋನು ಗೌಡ ಅವರು ಖುಷಿಯಲ್ಲಿದ್ದಾರೆ. ಯಾಕೆಂದರೆ ಅವರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಕಾಂತರಾಜ್ ಕನ್ನಳ್ಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಶಬ್ದ ಚಿತ್ರದಲ್ಲಿ ಸೋನು ಗೌಡ ಬಣ್ಣ ಹಚ್ಚಲಿದ್ದಾರೆ. ಇದರ ಹೊರತಾಗಿ ಮಹೇಶ್ ಚಿನ್ಮಯ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ವಸುಂಧರಾದೇವಿಯಲ್ಲಿ ನಟಿಸುತ್ತಿದ್ದಾರೆ.


“ಶಬ್ದ ಚಿತ್ರದಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದೇನೆ. ಗುಲ್ಟು ಚಿತ್ರದ ನಂತರ ನನ್ನ ಕೆರಿಯರ್ ನಲ್ಲಿ ಎರಡನೇ ಬಾರಿಗೆ ಪೋಲಿಸ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಶಬ್ದ ಚಿತ್ರ 2019ರಲ್ಲಿಯೇ ಆರಂಭವಾಗಬೇಕಿತ್ತು. ಕೊರೋನಾದಿಂದಾಗಿ ತಡವಾಯಿತು. ಸಿನಿಮಾದ ಚಿತ್ರಕಥೆ ತುಂಬಾ ಚಾಣಾಕ್ಷತನದಿಂದ ಕೂಡಿದೆ. ನನಗೆ ಇನ್ನೊಂದು ಶೆಡ್ಯೂಲ್ ಶೂಟಿಂಗ್ ಇದೆ” ಎಂದಿದ್ದಾರೆ.


ಇನ್ನು ವಸುಂಧರಾದೇವಿ ಚಿತ್ರದಲ್ಲಿ ಸೋನು ಗೌಡ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. “ನನ್ನ ಕೆಲಸಗಳು ಸರಿಯೋ ತಪ್ಪೋ ಎಂದು ನಿರ್ಧರಿಸುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ನಾನು ಈ ಚಿತ್ರದಲ್ಲಿ ಶಕ್ತಿಯುತ ರಾಜಕಾರಿಣಿಯಾಗಿ ನಟಿಸಿದ್ದೇನೆ. ಆದ್ದರಿಂದ ನಾನು ಕೆಲವು ಸಾಧಕ ಬಾಧಕ ಹೊಂದಿರುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಧರ್ಮ ಕೀರ್ತಿರಾಜ್ ಜೊತೆಗೆ ಎರಡನೇ ಬಾರಿ ನಟಿಸಿದ್ದೇನೆ” ಎಂದಿದ್ದಾರೆ.


ಸೋನು ಅವರ ಕೆರಿಯರ್ ಸುಧಾರಿಸಿರುವುದಕ್ಕೆ ಖುಷಿಯಾಗಿರುವ ಅವರು “ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವುದಕ್ಕೆ ಖುಷಿ ಇದೆ. ನನ್ನ ಕೈಯಲ್ಲಿ 5 ಸಿನಿಮಾಗಳಿವೆ. ಪರ್ಮಾಫೆನ್ಸ್ ಮಾಡುವಂತಹ ಪಾತ್ರಗಳು ಸಿಕ್ಕಿವೆ. ನಾನು ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ. ಇದರೊಂದಿಗೆ ಜೊತೆ ಜೊತೆಯಲಿ ಸೀರಿಯಲ್ ಕೂಡಾ ಬಂತು. ಇದು ನನ್ನನ್ನು ಹೊಸ ರೀತಿಯ ಪ್ರೇಕ್ಷಕರ ಬಳಿ ಕರೆದುಕೊಂಡು ಹೋಯಿತು ” ಎಂದಿದ್ದಾರೆ.




