• April 8, 2022

ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಮನ ಸೆಳೆದ ಸೋನಂ ಕಪೂರ್

ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಮನ ಸೆಳೆದ ಸೋನಂ ಕಪೂರ್

ಬಾಲಿವುಡ್ ನಟಿ ಸೋನಂ ಕಪೂರ್ ಮೊನ್ನೆಯಷ್ಟೇ ತಾವು ತಾಯಿ ಆಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟಿ ಜಾನ್ವಿ ಕಪೂರ್ ಸೇರಿದಂತೆ ಹಲವರು ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ತಿಳಿಸಿದ್ದರು.

ಈಗ ಸೋನಂ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಸೀರೆ ಉಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಸೋನಂ.

ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿಯಾಗಿರುವ ಸೋನಂ 2007ರಲ್ಲಿ ತೆರೆ ಕಂಡ ಸಾವರಿಯಾ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. ಸುಮಾರು 20 ಸಿನಿಮಾಗಳಲ್ಲಿ ನಟಿಸಿರುವ ಸೋನಂ ಅವರು ನಟಿಸಿರುವ “ಬ್ಲೈಂಡ್” ಸಿನಿಮಾ ತೆರೆ ಕಾಣಬೇಕಿದೆ. ಇನ್ನು ಇದರ ಜೊತೆಗೆ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಸೋನಂ ಕಪೂರ್ ಶೋಮೆ ಮಖೀಜಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

2018ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಪ್ರೀತಿಸಿ ಮದುವೆಯಾದ ಸೋನಂ ಕಪೂರ್ ಅವರಿಗೆ ಇದೇ ಆಗಸ್ಟ್ ನಲ್ಲಿ ಮಗು ಬರುವ ನಿರೀಕ್ಷೆ ಇದೆ.