• April 29, 2022

ನನ್ನೊಳಗಿನ ಜೀವಕ್ಕಾಗಿ ಜಾಗರೂಕಳಾಗಿದ್ದೇನೆ ಎಂದ ಬಾಲಿವುಡ್ ಬೆಡಗಿ

ನನ್ನೊಳಗಿನ ಜೀವಕ್ಕಾಗಿ ಜಾಗರೂಕಳಾಗಿದ್ದೇನೆ ಎಂದ ಬಾಲಿವುಡ್ ಬೆಡಗಿ

ಬಾಲಿವುಡ್ ನ ಖ್ಯಾತ ನಟಿ ,ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಹಾಗೂ ಪತಿ ಆನಂದ್ ಅಹುಜಾ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದ್ದು ಕಳೆದ ತಿಂಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು.

ಐದು ತಿಂಗಳ ಗರ್ಭಿಣಿ ಆಗಿರುವ ಸೋನಂ ಗರ್ಭಾವಸ್ಥೆಯ ಕಷ್ಟಕರ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.

“ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಎದುರಿಸುವ ಕಷ್ಟಗಳ ಕುರಿತು ಯಾರೂ ಮಾತನಾಡುವುದಿಲ್ಲ. ನನಗೆ ಸುಖವಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಇದರಿಂದ ನನಗೆ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಬಾರಿ ಬಾತ್ ರೂಂ ಗೆ ತೆರಳಬೇಕಾಗುತ್ತದೆ. ಆದರೂ ಕೆಲವು ಬಾರಿ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ನಿದ್ದೆ ಮಾಡುತ್ತೇನೆ. ಈ ಸಮಯದಲ್ಲಿ ಯಾರಿಂದಲೂ ನನ್ನನ್ನು ಎಬ್ಬಿಸಲು ಸಾಧ್ಯವಾಗುವುದಿಲ್ಲ. ನಾನು ಬೆಳಿಗ್ಗೆ ಬೇಗನೆ ಏಳುವ ವ್ಯಕ್ತಿ. ಆದರೆ ಈಗ ಬೆಳಿಗ್ಗೆ 8-30 ಆದರೂ ಹಾಸಿಗೆ ಬಿಟ್ಟು ಏಳುವುದಕ್ಕೆ ಆಗುತ್ತಿಲ್ಲ. ಈ ಸಮಯದಲ್ಲಿ ನಾನು ಡಯೆಟ್ ಮಾಡುತ್ತಿಲ್ಲ. ಈಗ ಆರೋಗ್ಯದಿಂದ ಇರುವುದು ಮುಖ್ಯ. ನನ್ನೊಳಗೆ ಒಂದು ಜೀವ ಇರುವುದರಿಂದ ನಾನು ಜಾಗರೂಕತೆಯಿಂದ ಇರಬೇಕಾಗಿದೆ” ಎಂದಿದ್ದಾರೆ ಸೋನಂ ಕಪೂರ್.

ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಸೋನಂ. ನಾಲ್ಕು ಕೈಗಳು ನಿನ್ನನ್ನು ಉತ್ತಮವಾಗಿ ಬೆಳೆಸಲು … ಎರಡು ಹೃದಯಗಳು ನಿನಗಾಗಿ ಮಿಡಿಯುತ್ತವೆ… ಒಂದು ಕುಟುಂಬ ನಿನಗೆ ಪ್ರೀತಿ ಹಾಗೂ ಬೆಂಬಲ ನೀಡುತ್ತದೆ.. ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.