- April 19, 2022
ಭಾವಿ ಪತಿಯ ಮೊದಲ ಭೇಟಿ ಬಗ್ಗೆ ಹೇಳಿದ ಐಶ್ವರ್ಯ ಸಾಲಿಮಠ್


ಕಿರುತೆರೆ ನಟಿ ಐಶ್ವರ್ಯ ಸಾಲಿಮಠ ಹಾಗೂ ನಟ ವಿನಯ್ ಯುಜೆ ಇತ್ತೀಚೆಗೆ ಬಂಧುಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ಇವರಿಬ್ಬರೂ ಇದುವರೆಗೂ ತಮ್ಮ ಗೆಳೆತನದ ಆರಂಭದ ದಿನಗಳನ್ನು ಬಹಿರಂಗ ಪಡಿಸಿರಲಿಲ್ಲ. ಈಗ ಐಶ್ವರ್ಯ ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.


ಇನ್ಸ್ಟಾಗ್ರಾಮ್ ನಲ್ಲಿ ಆಸ್ಕ್ ಮಿ ಕ್ವೆಶ್ಚನ್ ನಲ್ಲಿ ವಿನಯ್ ಅವರನ್ನು ಭೇಟಿಯಾದ ಸಂದರ್ಭದ ಬಗ್ಗೆ ತಮ್ಮ ಫಾಲೋವರ್ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.”2016ರ ಜೂನ್ ಏಳರಂದು ನಮ್ಮ ಮೊದಲ ಧಾರಾವಾಹಿಯ ಪ್ರೋಮೋ ಶೂಟಿಂಗ್ ನಲ್ಲಿ ನಾವು ಮೊದಲು ಭೇಟಿಯಾದೆವು” ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರಿಬ್ಬರೂ ಮೊದಲು ಜೊತೆಯಾಗಿ ಕ್ಲಿಕ್ಕಿಸಿದ ಫೋಟೋವನ್ನು ಶೇರ್ ಮಾಡಿದ್ದಾರೆ.




ಇದಲ್ಲದೇ ಅವರ ಲವ್ ಲೈಫ್ ಕುರಿತು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸದ್ಯದಲ್ಲಿಯೇ ಮದುವೆ ಆಗುತ್ತಿರುವುದಾಗಿ ತಿಳಿಸಿದ್ದಾರೆ. ಮದುವೆಗಾಗಿ ಶಾಪಿಂಗ್ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. ವಿನಯ್ ಹಾಗೂ ಐಶ್ವರ್ಯ ಫೆಬ್ರುವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.




ತಮ್ಮ ನಿಶ್ಚಿತಾರ್ಥದ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದರು.






