• March 30, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ ನಟನೆಯಲ್ಲಿ ಬ್ಯುಸಿ

ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ ನಟನೆಯಲ್ಲಿ ಬ್ಯುಸಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿಹೆಂಡ್ತಿ ಧಾರಾವಾಹಿಯಲ್ಲಿ ತುಳಸಿ ಆಗಿ ನಟಿಸಿರುವ ದೀಪಿಕಾ ಆರಾಧ್ಹ ಇದೀಗ ಬಾಡಿ ಗಾಡ್ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.
ಇಂಜಿನಿಯರಿಂಗ್ ಮುಗಿಸಿರುವ ದೀಪಿಕಾ ಈಗ ನಟನೆಗೆ ಇಳಿದಿದ್ದಾರೆ.

“ನಾನು ನಟನಾ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಸಾಮಾಜಿಕ ಜಾಲತಾಣದ ಪೇಜಸ್ ಮೂಲಕ ಹಲವು ಆಫರ್ಸ್ ಗಳಿಸಿ ಆಡಿಷನ್ ಮೂಲಕ ನನಗೆ ಅವಕಾಶ ದೊರಕಿತು” ಎಂದು ನಟನಾ ಪಯಣದ ಶುರುವಾದುದರ ಬಗ್ಗೆ ಹೇಳುತ್ತಾರೆ.

ತಮ್ಮ ಮೊದಲ ಸಿನಿಮಾ ಕುರಿತು ಉತ್ಸುಕರಾಗಿರುವ ದೀಪಿಕಾ ” ಇದು ನನ್ನ ಮೊದಲ ಸಿನಿಮಾ. ತಂಡದವರು ಆಯೋಜಿಸಿದ ನಟನಾ ವರ್ಕ್ ಶಾಪ್ ಲ್ಲಿ ಭಾಗಿಯಾದೆ‌. ಇದು ನನಗೆ ಪಾತ್ರ ಮಾಡಲು ಸಹಾಯ ಮಾಡಿತು. ನರ್ಸ್ ಆಗಿ ಕನ್ನಡದ ಜೊತೆಗೆ ಮಲೆಯಾಳಂ ಕೂಡಾ ಮಾತನಾಡಬೇಕಿತ್ತು. ಇದಕ್ಕೆ ತರಬೇತಿ ಬೇಕಿತ್ತು. ಮೊದಲ ಸಿನಿಮಾದಲ್ಲಿಯೇ ನನಗೆ ಉತ್ತಮವಾಗಿತ್ತು. ಗುರುಪ್ರಸಾದ್ ಸರ್ ಜೊತೆಗೆ ಕೆಲಸ ಮಾಡಿದ್ದು ಒಳ್ಳೆ ಕಲಿಯುವಿಕೆಯ ಅನುಭವ ನೀಡಿತು” ಎಂದಿದ್ದಾರೆ.

ಅಮರ ಪ್ರೇಮಿ ಅರುಣ್ ಹಾಗೂ ಔರಾ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. “ಅಮರ ಪ್ರೇಮಿ ಅರುಣ್ ಚಿತ್ರದಲ್ಲಿ ಉತ್ತರ ಕರ್ನಾಟಕದ ಭಾಷೆ ಮಾತನಾಡಿದ್ದೇನೆ. ಔರಾದಲ್ಲಿ ಉಡುಪಿ ಕನ್ನಡ ಮಾತನಾಡಿದ್ದೇನೆ. ನನಗೆ ಸಿಗುತ್ತಿರುವ ಪಾತ್ರಗಳನ್ನು ಎಂಜಾಯ್ ಮಾಡುತ್ತಿದ್ದೇನೆ” ಎಂದಿದ್ದಾರೆ.