• February 16, 2022

ಗಾಯಕ ಹಾಗೂ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ನಿಧನ

ಗಾಯಕ ಹಾಗೂ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ನಿಧನ

ಗಾಯಕ ಹಾಗೂ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ನಿಧನರಾಗಿದ್ದಾರೆ ..ಬಪ್ಪಿ ಲಹಿರಿ ಅವರಿಗೆ 69ವರ್ಷ ವಯಸ್ಸಾಗಿತ್ತು….ಎಂಬತ್ತು ಹಾಗೂ ತೊಂಭತ್ತರ ದಶಕದಲ್ಲಿ ಹಿಟ್ ಸಾಂಗ್ ಗಳನ್ನು ನೀಡಿದ್ದ ಬಪ್ಪಿ ಲಹಿರಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ…

69ವರ್ಷವಾಗಿದ್ದ ಬಪ್ಪಿ ಲಹಿರಿ ಅವರು ಅನಾರೋಗ್ಯದಿಂದ ಬಳಲುತ್ತಿತ್ತು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು..ಇನ್ನೇನು ಚೇತರಿಸಿಕೊಳ್ಳುತ್ತಾರೆ ಎನ್ನುವ ಹೊತ್ತಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ನಿನ್ನೆ ಮಧ್ಯರಾತ್ರಿ ನಿಧನರಾಗಿದ್ದಾರೆ…

ಚಲ್ತೆ ಚಲ್ತೆ… ಡಿಸ್ಕೋ ಡ್ಯಾನ್ಸರ್. ಶರಾಬಿ ಹೀಗೆ ಸಾಕಷ್ಟು ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು ಬಪ್ಪಿ ಲಹರಿ .. ಇತ್ತೀಚಿಗಷ್ಟೇ ಸಲ್ಮಾನ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ವೇದಿಕೆಯಲ್ಲಿ ಹಾಡುವ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ರು