• April 30, 2022

ಹಿಂದಿ ಇಂಗ್ಲೀಷ್ ಅಧಿಕೃತ ಭಾಷೆ ಹೊರತು ರಾಷ್ಟ್ರೀಯ ಭಾಷೆಯಲ್ಲ – ಸಿಂಪಲ್ ಸುಂದರಿ

ಹಿಂದಿ ಇಂಗ್ಲೀಷ್ ಅಧಿಕೃತ ಭಾಷೆ ಹೊರತು ರಾಷ್ಟ್ರೀಯ ಭಾಷೆಯಲ್ಲ – ಸಿಂಪಲ್ ಸುಂದರಿ

ರಾಷ್ಟ್ರೀಯ ಭಾಷೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡ ಭಾಷೆಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

“ಕಲಾವಿದರಾಗಿ ನಮ್ಮ ಬ್ರಾಂಡ್, ಕೆಲಸದ ಮೂಲಕ ನಮ್ಮ ಭಾಷೆ, ರಾಷ್ಟ್ರೀಯತೆ , ಮಾನವೀಯತೆಯನ್ನು ಪ್ರತಿನಿಧಿಸುವ ಜವಾಬ್ದಾರಿಯಿದೆ. ಪ್ರತಿಯೊಂದು ಭಾಷೆಗೂ ಅವರ ಜನರು ಹೆಮ್ಮೆ ಪಡಲು ಅದರದ್ದೇ ಆದ ಶ್ರೀಮಂತ ಇತಿಹಾಸವಿದೆ. ನನ್ನ ಅಭಿಪ್ರಾಯದಂತೆ ನಮ್ಮ ವಿಚಾರಗಳು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ನಂಬುತ್ತೇನೆ” ಎನ್ನುತ್ತಾರೆ ಸಿಂಪಲ್ ಸುಂದರಿ.

“ದೇಶದ ಎಲ್ಲಾ ಕಲಾವಿದರ ಮೇಲೆ ಗೌರವದ ಜೊತೆಗೆ ನಾನು ಸುದೀಪ್ ಸರ್ ಮಾತನ್ನು ಒಪ್ಪುತ್ತೇನೆ. ಭಾರತದಲ್ಲಿ ತಯಾರಾದ ಎಲ್ಲಾ ಸಿನಿಮಾಗಳನ್ನು ನಾವು ಭಾಷೆಯ ಹೊರತಾಗಿ ಮೆಚ್ಚುತ್ತೇವೆ. ಕೊನೆಗೆ ಇದು ಭಾರತದ ಸಿನಿಮಾ. ನಾವು ಎಲ್ಲಾ ಭಾಷೆಯನ್ನು ಹಾಗೂ ಸಂಸ್ಕೃತಿಯನ್ನು ಗೌರವಿಸುತ್ತೇವೆ. ಹಿಂದಿ ಹಾಗೂ ಇಂಗ್ಲೀಷ್ ನಮ್ಮ ದೇಶದ ಅಧಿಕೃತ ಭಾಷೆಗಳೇ ಹೊರತು ರಾಷ್ಟ್ರೀಯ ಭಾಷೆಗಳಲ್ಲ ಎಂಬುದನ್ನು ಒಪ್ಪಿಕೊಳ್ಳಲು ಇದು ಉತ್ತಮ ಸಮಯ” ಎಂದಿದ್ದಾರೆ.