• January 29, 2022

ವೈರಲ್ ಆಯ್ತು ಶ್ರೀ ಮುರುಳಿ ಶಿವಣ್ಣನಿಗೆ ಕೈ ತುತ್ತು ಕೊಟ್ಟ ವಿಡಿಯೋ

ವೈರಲ್ ಆಯ್ತು ಶ್ರೀ ಮುರುಳಿ ಶಿವಣ್ಣನಿಗೆ ಕೈ ತುತ್ತು ಕೊಟ್ಟ ವಿಡಿಯೋ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಂದರೆ ಎಲ್ಲರಿಗೂ ಪ್ರೀತಿ…ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾರಂಗದ ಕಲಾವಿದರು ಕೂಡ ಶಿವಣ್ಣ ಎಂದರೆ ಅಚ್ಚುಮೆಚ್ಚು ..

ಇನ್ನು ರಾಜ್ ಫ್ಯಾಮಿಲಿಯ ಮಕ್ಕಳಿಗಂತೂ ಶಿವರಾಜ್ ಕುಮಾರ್ ಎಂದರೆ ಪಂಚಪ್ರಾಣ ..ಯಾವುದೇ ತಾರತಮ್ಯವಿಲ್ಲದೆ ಹಮ್ಮು ಬಿಮ್ಮು ಇಲ್ಲದೆ ಶಿವರಾಜ್ ಕುಮಾರ್ ಪ್ರತಿಯೊಬ್ಬರ ಜೊತೆ ಸರಳವಾಗಿ ಪ್ರೀತಿ ಬೆರೆತು ಹೋಗುತ್ತಾರೆ… ಅದಕ್ಕಾಗಿಯೇ ಶಿವರಾಜ್ ಕುಮಾರ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಾರೆ ..

ಇನ್ನು ನಟ ಶ್ರೀಮುರಳಿ… ಶಿವರಾಜ್ ಕುಮಾರ್ ಅವರಿಗೆ ಕೈ ತುತ್ತು ನೀಡಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ… ಹೌದು ಶಿವರಾಜ್ ಕುಮಾರ್ ಮನೆಯ ನಡೆದ ಸಮಾರಂಭವೊಂದರಲ್ಲಿ ಶ್ರೀಮುರಳಿ ಶಿವರಾಜ್ ಕುಮಾರ್ ಅವರಿಗೆ ಕೈತುತ್ತು ನೀಡಿದ್ದಾರೆ …ಆ‌ ಸುಂದರವಾದ ವೀಡಿಯೋ ಸುದ್ದಿ ಈಗ ಯೂಟ್ಯೂಬ್ ನಲ್ಲಿ ಟ್ರೆಂಡ್ ಸೆಟ್ ಮಾಡುತ್ತಿದೆ ..

ಇನ್ನು ಸಂಬಂಧದಲ್ಲಿ ಶ್ರೀಮುರಳಿ ಅವರಿಗೆ ಶಿವರಾಜ್ ಕುಮಾರ್ ಮಾವನಾಗಬೇಕು ….ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರರ ಮಕ್ಕಳು ಶ್ರೀಮುರಳಿ ಹಾಗೂ ವಿಜಯ ರಾಘವೇಂದ್ರ ..ಇನ್ನು ಸರಳತೆ ವ್ಯಕ್ತಿತ್ವದ ವಿಚಾರದಲ್ಲಿ ಶ್ರೀಮುರಳಿ ಸದಾ ಫಾಲೋ ಮಾಡುತ್ತಾರೆ ಅವರಂತೆಯೇ ಸಿಂಪಲ್ ಆಗಿ ಇರಬೇಕು ಎಂದು ಬಯಸುತ್ತಾರೆ ..