• January 24, 2022

ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಕರುನಾಡ ಚಕ್ರವರ್ತಿ

ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಕರುನಾಡ ಚಕ್ರವರ್ತಿ

ಕರುನಾಡ ಚಕ್ರವರ್ತಿ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ ಸದ್ಯ ಒಂದೊಂದೇ ಸಿನಿಮಾಗಳನ್ನ ಕೊಡ್ತಿರೊ ನಟ ಶಿವರಾಜ್ ಕುಮಾರ್ ಪ್ಯಾನ್ ಇಂಡಿಯಾ*ಆಗಿ ಮಿಂಚಲು ರೆಡಿಯಾಗಿದ್ದಾರೆ …

ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ – ರಚಿತಾರಾಂ ಕಾಂಬಿನೇಶನ್ ನ “ಲಕಲಕ‌‌ ಲ್ಯಾಂಬರ್ಗಿನಿ” ಆಲ್ಬಮ್ ಸಾಂಗ್ ಎಲ್ಲರ ಮನಗೆದ್ದಿತ್ತು. .
ಇಂತಹ ಅದ್ದೂರಿ ಆಲ್ಬಂ ಸಾಂಗ್ ಅನ್ನು ತಮ್ಮ ಮಗಳು ಬಿಂದ್ಯಾ ಹುಟ್ಟುಹಬ್ಬಕ್ಕಾಗಿ ಆರ್ ಕೇಶವ್(ರೈತ) ನಿರ್ಮಾಣ ಮಾಡಿದ್ದರು.ಈಗ ಆರ್ ಕೇಶವ್ ಸಿನಿಮಾ ನಿರ್ಮಾಣಕ್ಕೆ ‌ಮುಂದಾಗಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೇಶವ್ ಬಂಡವಾಳ ಹಾಕಲಿದ್ದಾರೆ.

ಬುದ್ದಿವಂತ 2″ ಚಿತ್ರದ ನಿರ್ದೇಶಕ ಆರ್. ಜಯರಾಂ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ…1970 ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆಯಾಗಿದೆ.
ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆ ಹಾಗೂ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ಆರ್ ಜೈ ತಿಳಿಸಿದ್ದಾರೆ.