• July 11, 2022

ರೆಸಿಡೆನ್ಷಿಶಿಯಲ್ ವೃತ್ತಕ್ಕೆ ಶಿವಣ್ಣನ ಹೆಸರು.

ರೆಸಿಡೆನ್ಷಿಶಿಯಲ್ ವೃತ್ತಕ್ಕೆ ಶಿವಣ್ಣನ ಹೆಸರು.

ರಾಜ್ ಕುಟುಂಬದ ಮೇಲೆ ಕನ್ನಡ ನಾಡಿನಲ್ಲಿ ಅಪಾರ ಅಭಿಮಾನವಿದೆ. ಅವರ ಕಲೆಗೆ ಹಾಗು ಸಮಾಜಸೇವೆಗೆ ಪ್ರತೀ ಕನ್ನಡಿಗನ ಮನೆಗಳೂ ತಲೆದೂಗುತ್ತವೆ. ಅವರ ಹೆಸರು ಶಾಶ್ವತವಾಗಿ ಉಳಿಯಲು, ರಸ್ತೆಗಳಿಗೆ, ವೃತ್ತಗಳಿಗೆ ಅವರ ಹೆಸರಿನಿಂದ ನಾಮಕರಣ ಮಾಡುವುದು ವಾಡಿಕೆ. ಅಂದು ರಾಜಕುಮಾರ್ ಅವರ ಹೆಸರನ್ನು ಕರ್ನಾಟಕದ ಹಲವೆಡೆ ಇಟ್ಟಿದ್ದರು. ಇತ್ತೀಚಿಗಷ್ಟೇ ಬೆಂಗಳೂರಿನ ರಸ್ತೆಯೊಂದನ್ನು ಅಧಿಕೃತವಾಗಿ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ಘೋಷಣೆ ಮಾಡಲಾಯಿತು. ಈಗ ಈ ಸಾಲಿಗೆ ಶಿವಣ್ಣನವರ ಹೆಸರು ಸೇರಿಕೊಳ್ಳುತ್ತಿದೆ.

ಬೆಂಗಳೂರಿನ ಮಾನ್ಯತಾ ರೆಸಿಡೆನ್ಷಿಶಿಯಲ್ ಸರ್ಕಲ್ ನಲ್ಲಿ ವರುಷಗಳಿಂದ ಶಿವಣ್ಣ ವಾಸವಿದ್ದಾರೆ. ಅಲ್ಲಿನ ಮನೆಯೊಂದರಲ್ಲಿ ತಮ್ಮ ಕುಟುಂಬದ ಜೊತೆ ವಾಸಿಸುತ್ತಿರುವ ಇವರು ತಮ್ಮ ನೆರೆಹೊರೆಯವರೆಲ್ಲರ ಜೊತೆಗೆ ಉತ್ತಮ ನಂಟು ಹೊಂದಿದ್ದಾರೆ. ಸ್ಟಾರ್ ಎಂಬ ಯಾವುದೇ ಅಹಂ ಇಲ್ಲದೆ ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರುವ ಶಿವಣ್ಣ ಹಾಗು ಅವರ ಕುಟುಂಬ ಎಂದರೆ ಅಲ್ಲಿನ ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಶಿವಣ್ಣನವರಿಗೆ ಜನುಮದಿನದಂದು ಒಂದೊಳ್ಳೆ ಉಡುಗೊರೆ ನೀಡಲು ‘ಮಾನ್ಯತಾ ರೆಸಿಡೆನ್ಷಿಶಿಯಲ್ ಸರ್ಕಲ್’ ನವರು ಸಜ್ಜಾಗಿದ್ದಾರೆ. ತಮ್ಮ ಪ್ರದೇಶಕ್ಕೆ ‘ಶಿವರಾಜಕುಮಾರ್ ವೃತ್ತ ಎಂದು ಹೆಸರಿಡಲು ಮುಂದಾಗಿದ್ದಾರೆ. ಹಲವು ಕಡೆ ಹಲವು ರೀತಿ ತಮ್ಮ ಮೇಲಿನ ಅಭಿಮಾನದ ನಿದರ್ಶನ ಕಂಡಿರುವ ಶಿವಣ್ಣನಿಗೆ ಇದೀಗ ಅವರ ವಾಸಸ್ಥಾನಕ್ಕೆ ಅವರದೇ ಹೆಸರಿಡಲಾಗುತ್ತಿದೆ.