- July 12, 2022
ಖಾತ್ರಿಯಾಯ್ತು ಶಿವಣ್ಣನ ಮುಂದಿನ ಸಿನಿಮಾ.


ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಚೈತನ್ಯಶಾಲಿ ಕಲಾವಿದರಲ್ಲಿ ಒಬ್ಬru ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್. ಇಂದು(ಜುಲೈ 12) ತಮ್ಮ ಅರವತ್ತನೇ ಜನ್ಮದಿನದ ಸಂತಸದಲ್ಲಿರುವ ಶಿವಣ್ಣnige ಸಾಲು ಸಾಲು ಸಿನಿಮಾಗಳು ಕಾಯುತ್ತಿವೆ. ಇನ್ನೂ ಒಂದಿಷ್ಟು ಸಿನಿಮಾಗಳು ಇಂದಷ್ಟೇ ಘೋಷಣೆಯಾಗಿವೆ. ಹಾಗಾಗಿ ಶಿವಣ್ಣನ ಕಲಾಭಿಮಾನದ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿಬರುತ್ತಿದೆ. ಸದ್ಯ ತಮ್ಮ 125ನೇ ಸಿನಿಮಾ ‘ವೇದಾ’ದ ಚಿತ್ರೀಕರಣದಲ್ಲಿ ನಿರತರಾಗಿರುವ ಶಿವಣ್ಣನವರು ಇದಾದ ನಂತರ ಕಾಯುತ್ತಿರುವ ಹಲವು ಸಿನಿಮಾಗಳಲ್ಲಿ ಯಾವುದರಲ್ಲಿ ಮೊದಲು ನಟಿಸಲಿದ್ದಾರೆ ಎಂಬ ಪ್ರಶ್ನೆಯಿತ್ತು. ಈಗ ಅದಕ್ಕೇ ಉತ್ತರ ಸಿಕ್ಕಿದೆ.


ಚಂದನವನದ ‘ವಿಕಟಕವಿ’ ಎಂದೇ ಖ್ಯಾತರಾಗಿರುವ ಯೋಗರಾಜ್ ಭಟ್ ಅವರ ಮುಂದಿನ ಸಿನಿಮಾ ಶಿವಣ್ಣನ 126ನೇ ಚಿತ್ರ ಆಗಿರಲಿದೆ. ಮೊದಲ ಬಾರಿಗೆ ಪಕ್ಕ ಆಕ್ಷನ್ ಡ್ರಾಮಾ ರೀತಿಯ ಕಥೆಗೆ ಆಕ್ಷನ್-ಕಟ್ ಹೇಳುತ್ತಿರುವ ಭಟ್ರು, ಒಂದೇ ಸಿನಿಮಾದಲ್ಲಿ ಪ್ರಭುದೇವ ಹಾಗು ಶಿವಣ್ಣ ಇಬ್ಬರನ್ನು ಜೊತೆಯಾಗಿ ತೆರೆಮೇಲೆ ತರಲಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 47ನೇ ಸಿನಿಮಾ ಇದಾಗಿದ್ದು, ತಾತ್ಕಾಲಿಕವಾಗಿ ‘ಪ್ರೊಡಕ್ಷನ್ ನಂಬರ್ 47’ ಎಂdu ಕರೆಯಲಾಗುತ್ತಿದೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರದಲ್ಲಿರಲಿದೆ. ಪ್ರಾಯಷಃ ಪಾನ್-ಇಂಡಿಯನ್ ಮಟ್ಟದಲ್ಲೇ ತಯಾರಾಗಲಿರುವ ಈ ಸಿನಿಮಾ ಗಒಂದು ದೊಡ್ಡ ಸಿನಿಮಾವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ಶಿವಣ್ಣನವರ ‘ವೇದಾ’ ಸಿನಿಮಾದ ನಂತರ ಈ ಚಿತ್ರ ಸೆಟ್ಟೆರಲಿದೆ.




