• May 1, 2022

ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಇದರ ಜೊತೆಗೆ ಸೆಂಚುರಿ ಸ್ಟಾರ್ ಹೊಸದಾಗಿರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಅರೇ, ಅದ್ಯಾವ ಹೊಸ ಪ್ರಯತ್ನ ಎಂದು ಆಲೋಚಿಸುತ್ತಿದ್ದೀರಾ? ಅಂದ ಹಾಗೇ ನಿಮ್ಮ ನೆಚ್ಚಿನ ಸೆಂಚುರಿ ಸ್ಟಾರ್ ಇದೀಗ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜ್ ಕುಮಾರ್ ಅವರ ಮಗಳು ನಿವೇದಿತಾ ಹೊಸ ವೆಬ್ ಸಿರೀಸ್ ಒಂದನ್ನು ನಿರ್ಮಾಣ ಮಾಡುತ್ತಿದ್ದು ಅದರಲ್ಲಿ ನಟಿಸುವ ಮೂಲಕ ವೆಬ್ ಸಿರೀಸ್ ಜಗತ್ತಿಗೆ ಕಾಲಿಡಲಿದ್ದಾರೆ ಶಿವಣ್ಣ.

ಶಿವರಾಜ್ ಕುಮಾರ್ ಅವರ “ಶ್ರೀ ಮುತ್ತು ಸಿನಿ ಸರ್ವಿಸ್” ನಿರ್ಮಾಣ ಸಂಸ್ಥೆಯಿಂದ ವೆಬ್ ಸೀರಿಸ್ ಮೂಡಿಬರುತ್ತಿದ್ದು ಉಳಿದ ಮಾಹಿತಿ ಇನ್ನು ಸಿಗಬೇಕಿದೆ. ಇನ್ನು ಕಥೆ ಈಗಾಗಲೇ ರೆಡಿಯಾಗಿದ್ದು ಶೀಘ್ರದಲ್ಲಿ ಶೂಟಿಂಗ್ ಶುರುವಾಗಲಿದೆ. ಇನ್ನು ಈ ವೆಬ್ ಸಿರೀಸ್ ನ ನಿರ್ದೇಶನ ಯಾರು ಮಾಡಲಿದ್ದಾರೆ, ಶಿವರಾಜ್ ಕುಮಾರ್ ಜೊತೆಗೆ ಬೇರೆ ಯಾರೆಲ್ಲಾ ಅಭಿನಯಿಸುತ್ತಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ನಟಿಸಲಿರುವ ಸೆಂಚುರಿ ಸ್ಟಾರ್ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.