- May 15, 2022
ಸಮುದ್ರದ ದಂಡೆಯಲ್ಲಿ ಕಸ ಹಾಕುವುದನ್ನು ನಿಲ್ಲಿಸಿ ಎಂದ ಶೈನ್ ಶೆಟ್ಟಿ


ಕಳೆದ ವರ್ಷದ ಲಾಕ್ ಡೌನ್ ನಲ್ಲಿ ನಟ ಶೈನ್ ಶೆಟ್ಟಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಊರು ಉಡುಪಿಯಲ್ಲಿ ಕಳೆದಿದ್ದರು. ಕರಾವಳಿಗನಾಗಿ ಸಮುದ್ರದ ದಂಡೆಯಲ್ಲಿ ಕಸ ನೋಡುತ್ತಿದ್ದರು.”ಬಿಯರ್ ಬಾಟಲ್ ಗಳು , ಡೈಪರ್ ಗಳು , ಚಿಪ್ಸ್ ಪ್ಯಾಕೆಟ್ , ಸ್ಲಿಪ್ಪರ್ ಗಳು ದಡದಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಇದು ನನಗೆ ಬೇಸರ ಉಂಟು ಮಾಡಿತು. ನನ್ನ ಬದುಕಿನ ಬಹುಪಾಲು ಸಮಯವನ್ನು ಕರಾವಳಿಯಲ್ಲಿ ಕಳೆದಿದ್ದೇನೆ. ಅಂದಿನಿಂದ ಇಂದಿನವರೆಗೂ ನೋಡಿದ್ದೇನೆ. ಪ್ರವಾಸಿಗರು ಕಸವನ್ನು ಎಸೆದು ಹೋಗುತ್ತಾರೆ. ಇದರಿಂದ ಸಮುದ್ರದ ಅಂದ ಹಾಳಾಗುತ್ತಿದೆ” ಎಂದಿದ್ದಾರೆ.




ಶೈನ್ ಅವರ ಕುಂದಾಪುರದ ಸ್ನೇಹಿತರು ಸಮುದ್ರದ ಸ್ವಚ್ಛ ಗೊಳಿಸುವ ಕ್ಯಾಂಪೇನ್ ಆರಂಭಿಸಿದಾಗ ಶೈನ್ ಕೂಡಾ ಸೇರಿಕೊಂಡರು.”ನಾನು ಬೀಚ್ ಕ್ಲೀನಿಂಗ್ ಡ್ರೈವ್ ಗೆ ಹೋದೆ. ಬೀಚ್ ಗಳನ್ನು ಉಳಿಸಲು ನಾನು ಏನನ್ನಾದರೂ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಕ್ಲೀನ್ ಕುಂದಾಪುರ ಎಂಬ ಸಂಸ್ಥೆಯ ಕಾರ್ಯವನ್ನು ಪ್ರಶಂಸಿಸಬೇಕು. ಏಳು ವರ್ಷಗಳ ಹಿಂದೆ ಕರಾವಳಿ ಯಿಂದ ಕಣ್ಮರೆಯಾದ ಆಲಿವ್ ರಿಡ್ಲಿಗಳನ್ನು ಬೀಚ್ ಕ್ಲೀನಿಂಗ್ ಡ್ರೈವ್ ಮರಳಿ ತಂದಿರುವುದು ಪ್ರಶಂಸೆಗೆ ಅರ್ಹವಾಗಿದೆ” ಎಂದಿದ್ದಾರೆ ಶೈನ್.






ಆಮೆಗಳನ್ನು ಉಳಿಸಿ ಅಭಿಯಾನದಲ್ಲಿ ಹಾಗೂ ಆಮೆ ಹಬ್ಬದಲ್ಲಿ ಪಾಲ್ಗೊಳ್ಳಲು ಇದು ಶೈನ್ ಅವರನ್ನು ಪ್ರೇರೇಪಿಸಿತು.”ನಮ್ಮ ಸಮುದ್ರ ಜೀವನ ಭೂಮಿಯ ಉಳಿದ ಜಾತಿಗಳಂತೆ ಗೌರವಾನ್ವಿತ ಆಗಿರಬೇಕು. ನಮ್ಮ ಸುತ್ತಮುತ್ತ ಜಾಗವನ್ನು ಅರಿತು ಕಸ ಹಾಕುವುದನ್ನು ನಿಲ್ಲಿಸಬೇಕು. ವಿಶೇಷವಾಗಿ ಸಮುದ್ರದ ದಂಡೆಯಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು” ಎಂದಿದ್ದಾರೆ ಶೈನ್.






