- May 18, 2022
ಸೂಪರ್ ವುಮೆನ್ ಅವತಾರದಲ್ಲಿ ಬಾಲಿವುಡ್ ಬೆಡಗಿ


ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇನ್ಸ್ಟಾ ಗ್ರಾಂ ನಲ್ಲಿ ಸೂಪರ್ ವುಮೆನ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರ ನಿಕಮ್ಮಾ ದ ಘೋಷಣೆ ಕೂಡಾ ಈ ಸಂದರ್ಭದಲ್ಲಿ ಆಕೆ ಮಾಡಿದ್ದಾರೆ.




ತಮ್ಮ ಮುಂದಿನ ಚಿತ್ರವನ್ನು ವಿಡಿಯೋ ಮೂಲಕ ಘೋಷಿಸಿರುವ ಶಿಲ್ಪಾ “ನಾವು ಈಗ ಹೊಚ್ಚ ಹೊಸ ಅವತಾರದಲ್ಲಿ ಮಾತನಾಡುತ್ತಿದ್ದೇವೆ. ಯಾರು ನಿಜವಾದ ಅವನಿ? ಸ್ವಲ್ಪ ಪ್ರೀತಿಯನ್ನು ತೋರಿಸಿ. ಹೆಚ್ಚಿನದಕ್ಕಾಗಿ ಈ ಜಾಗವನ್ನು ವೀಕ್ಷಿಸಿ. ಮರೆಯದಿರಿ. ಮೇ 17ರಂದು ನಿಕಮ್ಮಾ ಟ್ರೇಲರ್ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.




ಈ ಸಿನಿಮಾದಲ್ಲಿ ಶಿಲ್ಪಾ ಈ ಮೊದಲು ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವನಿಯಾಗಿ ರಂಜಿಸಲು ಬರುತ್ತಿದ್ದಾರೆ. ಸಬೀರ್ ಖಾನ್ ಈ ಚಿತ್ರದ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ 14 ವರ್ಷಗಳ ನಂತರ ಬೆಳ್ಳಿತೆರೆಗೆ ಮರಳಿದ್ದಾರೆ. ಈ ಸಿನಿಮಾದಲ್ಲಿ ಅಭಿಮನ್ಯು ಹಾಗೂ ಶಿರ್ಲೆ ಸೇಠಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೂನ್ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ.






