• March 5, 2022

ಹೊಸ ಸಿನಿಮಾದ ಹೆಸರು ಘೋಷಿಸಿದ ಶಿಲ್ಪಾ ಶೆಟ್ಟಿ

ಹೊಸ ಸಿನಿಮಾದ ಹೆಸರು ಘೋಷಿಸಿದ ಶಿಲ್ಪಾ ಶೆಟ್ಟಿ

ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರು ಮತ್ತೆ ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, 14 ವರ್ಷಗಳ ಸುದೀರ್ಘ ಗ್ಯಾಪ್ ನ ನಂತರ ಮತ್ತೆ ಸಿನಿಮಾ ರಂಗದತ್ತ ಮುಖ ಮಾಡಿದ್ದ ಶಿಲ್ಪಾ ಶೆಟ್ಟಿ 2021ರಲ್ಲಿ ತೆರೆ ಕಂಡ ಹಂಗಾಮಾ 2 ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು‌. ಇದೀಗ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದು ಆ ವಿಚಾರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸಿನಿಮಾ “ಸುಖಿ”ಎಂಬ ಶೀರ್ಷಿಕೆ ಹೊಂದಿದ್ದು ಸೋನಾಲ್ ಜೋಶಿ ನಿರ್ದೇಶಿಸಲಿದ್ದಾರೆ. ಟಿ -ಸಿರೀಸ್ ಹಾಗೂ ಅಬುಂಡಾಟಿಯಾ ಎಂಟರ್ಟೈನ್ಮೆಂಟ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಮಹಿಳಾ ಪ್ರಧಾನ ಸಿನಿಮಾದಂತೆ ಕಾಣುವ ಸುಖಿ ಸಿನಿಮಾದ ಪೋಸ್ಟರ್ ನ್ನು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಂದ ಹಾಗೆ ಇನ್ ಸ್ಟಾಗ್ರಾಂನಲ್ಲಿ ಬೂಮರಾಂಗ್ ವಿಡಿಯೋ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಅದರಲ್ಲಿ ಶಿಲ್ಪಾ ಅವರು ಕ್ಲಾಪ್ ಬೋರ್ಡ್ ಹಿಡಿದುಕೊಂಡಿರುವ ದೃಶ್ಯ ಕೂಡಾ ಕಾಣಬಹುದು. ಜೊತೆಗೆ ” ಹೊಸ ಚಿತ್ರ, ಹೊಸ ಪ್ರಯಾಣ, ಹೊಸ ಪಾತ್ರ – ಸುಖಿ” ಎಂದು ಬರೆದುಕೊಂಡಿದ್ದಾರೆ. ಅಂದ ಹಾಗೇ ಶಿಲ್ಪಾ ಅವರ ಈ ಪ್ರಾಜೆಕ್ಟ್ ಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಸುರಿದುಬಂದಿದೆ.

ನಟನೆಯ ಹೊರತಾಗಿ ತಮ್ಮ ಫಿಟ್ನೆಸ್ ನಿಂದಾಗಿಯೂ ಗಮನ ಸೆಳೆದಿರುವ ಶಿಲ್ಪಾ ಶೆಟ್ಟಿ ಸದ್ಯ “ಇಂಡಿಯಾಸ್ ಗಾಟ್ ಟ್ಯಾಲೆಂಟ್” ಎನ್ನುವ ರಿಯಾಲಿಟಿ ಶೋ ವಿನ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.