• January 17, 2022

ಸೀರೆಯುಟ್ಟು ಮೋಡಿ ಮಾಡಿದ “ಕನ್ನಡತಿ”ಯ ವರುಧಿನಿ

ಸೀರೆಯುಟ್ಟು ಮೋಡಿ ಮಾಡಿದ “ಕನ್ನಡತಿ”ಯ ವರುಧಿನಿ

ಕನ್ನಡತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಫೇಮಸ್ ಧಾರಾವಾಹಿ ಕನ್ನಡತಿ… ಪಾತ್ರವರ್ಗ, ಕಲಾವಿದರು,ಕತೆಯ ಮೂಲಕವೇ ಹೆಚ್ಚು ಪ್ರೇಕ್ಷಕರ ಗಮನ ಸೆಳೆದಿರುವ ಧಾರಾವಾಹಿ ಕನ್ನಡತಿ …

ಧಾರಾವಾಹಿಯಲ್ಲಿರುವಂತಹ ಭುವಿ, ಹರ್ಷ, ಅಮ್ಮಮ್ಮ, ವರುಧಿನಿ, ಸಾನಿಯಾ ಹೀಗೆ ಪ್ರತಿ ಪಾತ್ರವರ್ಗವು ಕೂಡ ತನ್ನದೇ ಆದಂತಹ ಸ್ಟೈಲ್ ಹಾಗೂ ಮ್ಯಾನರಿಸಂ ಹೊಂದಿದೆ …ಆದ್ದರಿಂದಲೇ ಪ್ರತಿ ಪಾತ್ರವೂ ತನ್ನದೇ ಆದ ತೂಕ ಉಳಿಸಿಕೊಂಡು ಬರುತ್ತಿದೆ.. ಇನ್ನು ಧಾರಾವಾಹಿಯ ನಾಯಕ ನಾಯಕಿಯಷ್ಟೇ ಪ್ರಮುಖವಾದ ಪಾತ್ರ ವರುಧಿನಿ ಹೌದು ವರುಧಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾರ ಅನ್ನಯ್ಯ ಅವರು ಇತ್ತೀಚಿಗಷ್ಟೆ ತಮ್ಮ ಟ್ರೆಡಿಶನ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ..

ಸದಾ ಮಾಡ್ರನ್ ಆಗಿ ಕಾಣಿಸಿಕೊಳ್ಳುವ ಸಾರಾ ಅವರು ಇದೇ ಮೊದಲ ಬಾರಿಗೆ ಸೀರೆಯುಟ್ಟು ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ ..

ಆಲ್ ಟೈಮ್ ಮಾಡರ್ನ್ ಲುಕ್ ನಲ್ಲಿ ಸಾರಾ ಅವರನ್ನ ನೋಡಿದ ಅಭಿಮಾನಿಗಳು ಮೊದಲ ಬಾರಿಗೆ ಸೀರೆಯಲ್ಲಿ ಕಂಡು ಫುಲ್ ಖುಷ್ ಆಗಿದ್ದಾರೆ ..