• February 19, 2022

ಕಲಾತಪಸ್ವಿ ರಾಜೇಶ್ ನಿಧನ

ಕಲಾತಪಸ್ವಿ ರಾಜೇಶ್ ನಿಧನ

ಕಳೆದ ಒಂದು ವಾರದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ರಾಜೇಶ್ ನಿಧನರಾಗಿದ್ದಾರೆ…ಉಸಿರಾಟದ ತೊಂದರೆ ಹಾಗೂ ವಯೋಸಹಕ ಖಾಯಿಲೆಯಿಂದ ಬಳಲ್ತಿದ್ದರು ರಾಜೇಶ್…

ಮೂರು ದಿನಗಳ ಹಿಂದೆ ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು‌ ಆದರೆ ಇಂದು ಮುಂಜಾನೆ ಉಸಿರಾಟದ ಸಮಸ್ಯೆಯಿಂದ ನಟ ರಾಜೇಶ್ ಸಾವನ್ನಪ್ಪಿದ್ದಾರೆ…ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ರಾಜೇಶ್…

ಸುಮಾರು ದಿನಗಳಿಂದ ವೆಂಟಿಲೇಟರ್ ಸಹಾಯದಿಂದ ರಾಜೇಶ್ ಅವರಿಗೆ ಚಿಕಿತ್ಸೆ ಕೊಡಲಾಗ್ತಿತ್ತು…ರಾಜೇಶ್ ಪುತ್ರಿ‌ ನಿದೇದಿತಾ ಹಾಗೂ ಅಳಿಯ ಅರ್ಜುನ್ ಸರ್ಜಾ ಅವ್ರನ್ನ ಬಿಟ್ಟು‌ ಅಗಲಿದ್ದಾರೆ..ರಾಜೇಶ್ ಅವ್ರ ಪಾರ್ಥಿವ ಶರೀರವನ್ನ ಅವ್ರ ಸ್ವಗೃಹ ವಿಧ್ಯಾರಣ್ಯ ಪುರದಲ್ಲಿ ಅಂತಿಮ ದರ್ಶನ ಕ್ಕೆ‌ ವ್ಯವಸ್ಥೆ ಮಾಡಲಾಗಿದೆ… ರಾಜೇಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ…