• April 3, 2022

ಗೆಳೆಯ ಕಿಚ್ಚನಿಗೆ ವಿಶ್ ಮಾಡಿದ ಸೆಹ್ವಾಗ್ ಹೇಳಿದ್ದೇನು ಗೊತ್ತಾ?

ಗೆಳೆಯ ಕಿಚ್ಚನಿಗೆ ವಿಶ್ ಮಾಡಿದ ಸೆಹ್ವಾಗ್ ಹೇಳಿದ್ದೇನು ಗೊತ್ತಾ?

ಈಗ ಸ್ಟಾರ್ ನಟರ ಚಿತ್ರಗಳದ್ದೇ ಹವಾ. ಮೊನ್ನೆಯಷ್ಟೇ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದು ಸ್ಯಾಂಡಲ್ ವುಡ್ ನಲ್ಲಿ ಸಕತ್ ಸದ್ದು ಮಾಡಿತ್ತು. ಇದೀಗ ಮತ್ತೊಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ “ವಿಕ್ರಾಂತ್ ರೋಣ” ತೆರೆಗೆ ಬರಲು ಸಜ್ಜಾಗಿದೆ. ಅಂದ ಹಾಗೇ ಯುಗಾದಿ ಹಬ್ಬದಂದು ಚಿತ್ರದ ಟೀಸರ್ ನ್ನು ಕೂಡಾ ಚಿತ್ರತಂಡ ಈಗಾಗಲೇ ರಿಲೀಸ್ ಮಾಡಿದೆ. ಇನ್ನು ಬಹುಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರದ ಇಂಗ್ಲೀಷ್ ಟೀಸರ್ ನ್ನು ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.

ಟ್ವಿಟ್ಟರ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಶೇರ್ ಮಾಡಿರುವ ಸೆಹ್ವಾಗ್ “ಬ್ಲಾಕ್ ಬಸ್ಟರ್ ಆ ರಹಾ ಹೈ , ವ್ಹಾವ್ ವಿಕ್ರಾಂತ್ ರೋಣ ವ್ಹಾವ್ !ಎಲ್ಲರೂ ಸಿದ್ದರಾಗಿ,ಗೆಳೆಯ ಸುದೀಪ್ ಅವರ ಅದ್ಭುತ ವರ್ಚಸ್.‌ ಜುಲೈ 28ರಂದು ವಿಶ್ವದಾದ್ಯಂತ 3ಡಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ” ಎಂದಿದ್ದಾರೆ.

ವಿವಿಧ ಭಾಷೆಗಳಲ್ಲಿ ಆಯಾಯ ಭಾಷೆಯ ನಟರು ಈ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ಮಲೆಯಾಳಂ, ತಮಿಳು , ತೆಲುಗು, ಹಿಂದಿಯಲ್ಲಿ ಮೋಹನ್ ಲಾಲ್, ಸಿಂಬು, ಚಿರಂಜೀವಿ, ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದಾರೆ.