- April 18, 2022
ರಾಕಿ ಭಾಯ್ ಸ್ಟೈಲ್ ನ ಹಿಂದಿನ ಗುಟ್ಟು ಇವರೇ ನೋಡಿ


ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಈಗಾಗಲೇ ರಿಲೀಸ್ ಆಗಿದ್ದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿಯೂ ಸಕತ್ ಸದ್ದು ಮಾಡುತ್ತಿದೆ. ಇನ್ನು ಕೆಜಿಎಫ್ ಸಿನಿಮಾದ ಡೈಲಾಗ್ ಗಳು ಕಿಯೇಟ್ ಮಾಡಿರುವ ಟ್ರೆಂಡ್ ಅಷ್ಟಿಷ್ಟಲ್ಲ. ಇದರ ಜೊತೆಗೆ ಯಶ್ ಅವರ ಸ್ಟೈಲ್ ಕೂಡಾ ಟ್ರೆಂಡ್ ಸೃಷ್ಟಿ ಮಾಡಿದೆ.


ಹೌದು, ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾದಲ್ಲಿನ ಯಶ್ ನ ಲುಕ್ ಗೆ, ಸ್ಟೈಲ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಅಂದ ಹಾಗೇ ಯಶ್ ಅವರ ಈ ಲುಕ್, ಸ್ಟೈಲ್ ಹೆಚ್ಚಿಸಿದ್ದು ಬೇರಾರೂ ಅಲ್ಲ, ಅವರು ಸೆಲೆಬ್ರಿಟಿ ಡಿಸೈನರ್ ಸಾನಿಯಾ ಸರ್ದಾರಿಯಾ.




ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ನ ಗಡ್ಡದಿಂದ ಹಿಡಿದು ಸೂಟ್, ವಾಚ್, ಬೂಟ್ಸ್ ಹೀಗೆ ಪ್ರತಿ ವಿಚಾರವನ್ನು ಪಾತ್ರಕ್ಕೆ ಅನುಗುಣವಾಗಿ ಡಿಸೈನ್ ಮಾಡಿರುವುದು ಸಾನಿಯಾ ಅವರ ಸಾಧನೆಯೇ ಸರಿ. ಯಶ್ ಅವರ ಸ್ಟೈಲ್‌ಗೆ ರೆಟ್ರೋ ಲುಕ್ ನೀಡಿ ತೆರೆ ಮೇಲೆ ಅವರನ್ನು ಡಿಫರೆಂಟ್ ಆಗಿ ತೋರಿಸಿದ್ದಾರೆ ಸಾನಿಯಾ ಸರ್ದಾರಿಯಾ.


ಕೆಜಿಎಫ್ ಸಿನಿಮಾ ಮಾತ್ರವಲ್ಲದೇ ಯಶ್ ಅವರ ಅವತಾರವೂ ಕೂಡಾ ಇದೀಗ ಸ್ಯಾಂಡಲ್ ವುಡ್ ನಲ್ಲಿ ಹೊಸದಾದ ಟ್ರೆಂಡ್ ಸೃಷ್ಟಿ ಮಾಡಿರುವುದಂತೂ ನಿಜ. ಒಟ್ಟಾರೆಯಾಗಿ ಕೆಜಿಎಫ್ ಸಿನಿಮಾ ಒಂದಲ್ಲ ಒಂದು ವಿಚಾರದಿಂದ ಸಿನಿಪ್ರಿಯರ ಮನ ಸೆಳೆಯುತ್ತಿದೆ.






