- May 11, 2022
ಮುಸ್ಲಿಂ ಮಹಿಳೆಯ ತಲ್ಲಣವನ್ನು ಬಿಚ್ಚಿಡಲಿದೆ ಸಾರಾ ವಜ್ರ


ಕನ್ನಡ ಸಿನಿಮಾರಂಗದಲ್ಲಿ ಕಾದಂಬರಿ ಆಧಾರಿತವಾದ ಚಿತ್ರಗಳು ಹೊಸದೇನಲ್ಲ. ಈಗ ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತವಾದ ಸಿನಿಮಾ ಇದೇ ತಿಂಗಳು ತೆರೆ ಮೇಲೆ ಬರುತ್ತಿದೆ. ಇನ್ನು ಕಾದಂಬರಿಯ ಲೇಖಕಿ ಸಾರಾ ಅವರ ಹೆಸರನ್ನೂ ಕೂಡಾ ಈ ಚಿತ್ರಕ್ಕೆ ಇಡಲಾಗಿದೆ.
ಗಡಿನಾಡ ಲೇಖಕಿ ಸಾರಾ ಅಬೂಬಕರ್ ಮುಸ್ಲಿಂ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ತಮ್ಮ ಬರವಣಿಗೆಯ ಮೂಲಕ ತೆರೆದಿಟ್ಟ ದಿಟ್ಟ ಮಹಿಳೆ. ಅವರ ಹಲವು ಕಥ, ಕಾದಂಬರಿಗಳು ಮುಸ್ಲಿಂ ಹೆಣ್ಣು ಮಗಳ ತಲ್ಲಣಗಳನ್ನು ಬಿಚ್ಚಿಡುತ್ತದೆ. ಈಗ ಅವರ ಇನ್ನೊಂದು ಕಾದಂಬರಿ ವಜ್ರಗಳು ಕಾದಂಬರಿ ಸಿನಿಮಾವಾಗಿ ಬರುತ್ತಿದೆ.


1989ರಿಂದ ಕಾಲಘಟ್ಟದಿಂದ ಆರಂಭವಾದ ಈ ಕಥೆ ಈಗಿನ ಕಾಲಕ್ಕೆ ಬಂದು ನಿಲ್ಲುತ್ತದೆ. ಅನು ಪ್ರಭಾಕರ್ ಈ ಸಿನಿಮಾದಲ್ಲಿ ಮುಸ್ಲಿಂ ಮಹಿಳೆಯಾಗಿ ಅಭಿನಯಿಸಿದ್ದು 20 ವರ್ಷದಿಂದ 60 ವರ್ಷದ ವಯಸ್ಸಿನವರಾಗಿ ನಟಿಸಿದ್ದಾರೆ. ಬ್ಯಾರಿ ಸಮುದಾಯದಲ್ಲಿ ಇರುವ ತ್ರಿವಳಿ ತಲಾಖ್ ನಿಂದ ಮಹಿಳೆಯರು ಅನುಭವಿಸುವ ಕಷ್ಟವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ನಿರೂಪಕ ರೆಹಮಾನ್ ಈ ಚಿತ್ರದಲ್ಲಿ ಅನು ಪ್ರಭಾಕರ್ ಅವರ ಗಂಡನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಇವರಿಬ್ಬರ ಹೊರತಾಗಿ ಸುಧಾ ಬೆಳವಾಡಿ, ಸುಹಾನಾ ಸೈಯದ್ , ರಮೇಶ್ ಭಟ್, ಮಾಸ್ಟರ್ ಆಯುಷ್ ಮುಂತಾದ ಕಲಾವಿದರು ನಟಿಸಿದ್ದಾರೆ.


ಶ್ವೇತ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ತಿಂಗಳ ಮೇ 20ರಂದು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.


