• May 10, 2022

ಮುನ್ನಾಭಾಯಿ ನಟನಾ ಜರ್ನಿ

ಮುನ್ನಾಭಾಯಿ ನಟನಾ ಜರ್ನಿ

ಬಾಲಿವುಡ್ ನಟ ಸಂಜಯ್ ದತ್ ಇದೀಗ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ಸಂಜಯ್ ದತ್ ಅವರು ತಮ್ಮ ಸಿನಿ ಕೆರಿಯರ್ ನಲ್ಲಿ 41 ವರ್ಷಗಳನ್ನು ಪೂರೈಸಿದ್ದಾರೆ. ಹೌದು, 1981ರಲ್ಲಿ ತೆರೆ ಕಂಡ ರಾಕಿ ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಸಂಜಯ್ ದತ್ ಅಭಿಮಾನಿಗಳಿಂದ ಸಂಜು ಎಂದೇ ಕರೆಸಿಕೊಳ್ಳುತ್ತಾರೆ.

ತಮ್ಮ ವೃತ್ತಿ ಜೀವನ 41 ವಸಂತಗಳನ್ನು ಪೂರೈಸಿರುವ ಸಂತಸದಲ್ಲಿರುವ ಮುನ್ನಾಭಾಯಿ ತಮ್ಮ ಚೊಚ್ಚಲ ಚಿತ್ರದ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ಸ್ಟಾ್ಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಸಂಜು “ನಾಲ್ಕು ದಶಕ + ಒಂದು ವರ್ಷ ಜೀವಮಾನದ ಪಯಣ. ಆಗ ರಾಖಿಗೆ ಈಗ ಅಧೀರನಿಗೆ ನೀಡಿದ ನಿಮ್ಮ ಪ್ರೀತಿಗೆ ಧನ್ಯವಾದಗಳು. ನನ್ನೆಲ್ಲಾ ಅಭಿಮಾನಿಗಳನ್ನು ಹೀಗೆಯೇ ರಂಜಿಸುತ್ತೇನೆ ಎಂದು ಆಶಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿರುವ ಕೆಜಿಎಫ್ 2 ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದರಲ್ಲಿ ಅಧೀರ ಪಾತ್ರದಲ್ಲಿ ಗಮನ ಸೆಳೆದಿರುವ ಸಂಜಯ್ ದತ್ ಅವರ ಪಾತ್ರಕ್ಕೆ ಪ್ರಶಂಸೆ ವ್ಯಕ್ತವಾಗಿದೆ.