• May 8, 2022

ಭಾವುಕ ಮಾತುಗಳನ್ನಾಡಿದ ಅಧೀರ ಹೇಳಿದ್ದೇನು ಗೊತ್ತಾ?

ಭಾವುಕ ಮಾತುಗಳನ್ನಾಡಿದ ಅಧೀರ ಹೇಳಿದ್ದೇನು ಗೊತ್ತಾ?

ತಾಯಂದಿರಲ್ಲಿ ಸೂಪರ್ ಪವರ್ ಇರುತ್ತದೆ. ಸಮಸ್ಯೆಗಳಿಗೆ ಸ್ಪಂದಿಸುವ ಅವಳು ಮಕ್ಕಳಿಗೆ ಸ್ಪೂರ್ತಿ ಆಗಿರುತ್ತಾಳೆ‌. ಬಾಲಿವುಡ್ ತಾರೆಯರಿಗೂ ಅಮ್ಮನೇ ಸ್ಪೂರ್ತಿ. ಅವರ ಬದುಕಿನಲ್ಲಿ ತಾಯಿ ಮಹತ್ವದ ಪಾತ್ರ ವಹಿಸಿದ್ದಾಳೆ‌.

ವಿಶ್ವ ತಾಯಂದಿರ ದಿನದ ವಿಶೇಷದಂದು ಬಾಲಿವುಡ್ ನಟ ಸಂಜಯ್ ದತ್ ತಮ್ಮ ತಾಯಿ ನರ್ಗೀಸ್ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಟ್ವಿಟರ್ ನಲ್ಲಿ ತಂದೆ ತಾಯಿ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡು ಪತ್ರ ಬರೆದಿದ್ದಾರೆ. ತಾಯಿಯಿಂದ ಪರಿಶ್ರಮ, ತಾಳ್ಮೆ, ಮಾನವೀಯತೆ, ಹೊಂದಾಣಿಕೆ ಎಲ್ಲವನ್ನೂ ಹೇಗೆ ಕಲಿತೆ ಎಂಬುದನ್ನು ಹಂಚಿಕೊಂಡಿದ್ದಾರೆ.

“ಅಮ್ಮ, ನೀನು ತಾಳ್ಮೆ , ಹೊಂದಾಣಿಕೆ , ಪರಿಶ್ರಮ ಎಲ್ಲದರ ಕುರಿತು ಕಲಿಸಿದೆ. ಜೊತೆಗೆ ಹಾಸ್ಯ ಮಾಡುವುದನ್ನು ಕಲಿಸಿದೆ. ನಿನಗೆ ಧನ್ಯವಾದ ಸಾಕಾಗದು. ನಿನ್ನನ್ನು ನನ್ನ ತಾಯಿಯಾಗಿ ಪಡೆದಿದ್ದಕ್ಕೆ ಧನ್ಯವಾದಗಳು. ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು” ಎಂದಿದ್ದಾರೆ.

ನರ್ಗೀಸ್ ತನ್ನ 51ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದಾಗಿ ಮರಣ ಹೊಂದಿದರು. ಸಂಜಯ್ ದತ್ ಅವರ ಚೊಚ್ಚಲ ಸಿನಿಮಾ ರಾಕಿ ರಿಲೀಸ್ ಗೆ ಕೆಲದಿನಗಳು ಬಾಕಿ ಇರುವಾಗ ನರ್ಗೀಸ್ ಇಹಲೋಕ ತ್ಯಜಿಸಿದ್ದರು. ಭಾರತೀಯ ಚಿತ್ರರಂಗದಲ್ಲಿ ಉತ್ತಮ ನಟಿ ಎಂದೇ ಗುರುತಿಸಿಕೊಂಡಿದ್ದ ನರ್ಗೀಸ್ ಬರ್ಸಾತ್ , ಆವಾರ , ಮದರ್ ಇಂಡಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಸಂಜಯ್ ದತ್ ಕೆಜಿಎಫ್ 2 ಸಿನಿಮಾದಲ್ಲಿ ಅಧೀರ ಪಾತ್ರದಲ್ಲಿ ಮಿಂಚಿದ್ದಾರೆ.